Home News Scam: ಮೊಬೈಲ್ ಬಳಕೆದಾರರೇ ಎಚ್ಚರ – ಬ್ಲೂಟೂತ್ ಆನ್ ಇದ್ರೆ ಸಾಕು ನಿಮ್ಮ ಬ್ಯಾಂಕ್ ಅಕೌಂಟ್...

Scam: ಮೊಬೈಲ್ ಬಳಕೆದಾರರೇ ಎಚ್ಚರ – ಬ್ಲೂಟೂತ್ ಆನ್ ಇದ್ರೆ ಸಾಕು ನಿಮ್ಮ ಬ್ಯಾಂಕ್ ಅಕೌಂಟ್ ಆಗುತ್ತೆ ಖಾಲಿ ಖಾಲಿ

Hindu neighbor gifts plot of land

Hindu neighbour gifts land to Muslim journalist

Scam: ಇತ್ತೀಚಿನ ದಿನಗಳಲ್ಲಿ ವಂಚಕರು ಯಾವೆಲ್ಲ ರೀತಿಯಲ್ಲಿ ಜನರನ್ನು ವಂಚಿಸುತ್ತಾರೆ ಎಂಬುದನ್ನು ತಿಳಿಯದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸರ್ಕಾರಗಳು ಇದಕ್ಕೆ ನಾನಾ ರೀತಿಯಲ್ಲಿ ಕಡಿವಾಣ ಹಾಕಲು ಪ್ರಯತ್ನಿಸಿದರು ಕೂಡ ಯಾವುದೂ ನಿಯಂತ್ರಣಕ್ಕೆ ಬಂದಿಲ್ಲ. ಫೋನು, ಮೆಸೇಜು, ವಿಡಿಯೋ ಕಾಲ್, ಒಟಿಪಿ, ಮದುವೆ ಇನ್ವಿಟೇಶನ್, ಶುಭಾಶಯಗಳನ್ನು ಕೋರುವುದು, ಹೀಗೆ ನಾನಾ ವಿಧಾನಗಳ ಮೂಲಕ ವಂಚಕರು ಜನರಿಂದ ಹಣವನ್ನು ವಂಚಿಸಿದ್ದಾರೆ. ಇದೀಗ ಹೊಸದಾಗಿ ಬ್ಲೂಟೂತ್ ಮುಖಾಂತರವೂ ಹಣವನ್ನು ಎದುರಿಸುವ ಜಾಲವನ್ನು ಪತ್ತೆಯಾಗಿದೆ.

ಹೌದು, ಇಂದು ಬ್ಲೂಟೂತ್ ದೈನಂದಿನ ಅಗತ್ಯವಾಗಿದೆ. ವೈರ್‌ಲೆಸ್ ಇಯರ್‌ಬಡ್‌ಗಳನ್ನು ಪ್ಲಗ್ ಮಾಡುವುದು, ನಿಮ್ಮ ಫೋನ್ ಅನ್ನು ನಿಮ್ಮ ಕಾರಿನ ಆಡಿಯೊಗೆ ಸಂಪರ್ಕಿಸುವುದು ಅಥವಾ ಸ್ನೇಹಿತರಿಗೆ ಫೋಟೋ ಕಳುಹಿಸುವುದು ಸೇರಿದಂತೆ ನಾನ ಕಾರಣಕ್ಕೆ ಇದು ಉಪಯುಕ್ತವಾಗಿದೆ. ಆದರೆ ಇನ್ನು ಮುಂದೆ ನೀವು ಬ್ಲೂಟೂತ್ ನ ಕೆಲಸ ಮುಗಿದ ತಕ್ಷಣ ಅದನ್ನು ಆಫ್ ಮಾಡಿಬಿಡಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿಯಾಗುವುದು ಪಕ್ಕ.

ಯಸ್, ಬಸ್‌ಗಳು, ರೈಲುಗಳು, ಮೆಟ್ರೋ ನಿಲ್ದಾಣಗಳು, ಮಾಲ್‌ಗಳು ಅಥವಾ ಮಾರುಕಟ್ಟೆಗಳಂತಹ ಜನದಟ್ಟಣೆಯ ಸ್ಥಳಗಳಲ್ಲಿ ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ. ವಿಶೇಷ ಸಾಫ್ಟ್‌ವೇರ್ ಮತ್ತು ಸಾಧನಗಳನ್ನು ಬಳಸಿಕೊಂಡು, ಬ್ಲೂಟೂತ್ ಆನ್ ಆಗಿರುವ ಹತ್ತಿರದ ಮೊಬೈಲ್ ಫೋನ್‌ಗಳನ್ನು ಅವರು ಪತ್ತೆ ಮಾಡುತ್ತಾರೆ. ನಂತರ ಅವರು ನಿಮ್ಮ ಫೋನ್‌ಗೆ ಜೋಡಿಸುವ ವಿನಂತಿಯನ್ನು ಕಳುಹಿಸುತ್ತಾರೆ. ಹೆಚ್ಚಿನ ಸಮಯ, ಜನರು ಯೋಚಿಸದೆ ಈ ವಿನಂತಿಯನ್ನು ಸ್ವೀಕರಿಸುತ್ತಾರೆ. ಇಲ್ಲಿಂದಲೇ ವಂಚನೆ ಪ್ರಾರಂಭವಾಗುತ್ತದೆ.

 ನಿಮ್ಮ ಫೋನ್ ಗೆ ಬ್ಲೂಟೂತ್ ಮುಖಾಂತರ ವಂಚಕರು ಕನೆಕ್ಟ್ ಆದ ಬಳಿಕ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಡಾಟಾವನ್ನು ಅವರು ಸಂಗ್ರಹಿಸಬಹುದು. ಬಳಿಕ ಇವುಗಳನ್ನು ಇಟ್ಟುಕೊಂಡು ನಿಮ್ಮನ್ನು ಆಟವಾಡಿಸಬಹುದು ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ನಲ್ಲಿರುವ ಹಣವನ್ನು ಎದುರಿಸಿ ನಿಮ್ಮನ್ನು ಮಂಗ ಕೂಡ ಮಾಡಬಹುದು. ಜೊತೆಗೆ ಬ್ಲೂಜಾಕಿಂಗ್, ಬ್ಲೂಸ್ನಾರ್ಫಿಂಗ್ ಮತ್ತು ಬ್ಲೂಬಗ್ಗಿಂಗ್ ಎಂದು ಕರೆಯಲ್ಪಡುವ ಇದೇ ರೀತಿಯ ದಾಳಿಗಳು ನಿಮ್ಮ ಅರಿವಿಲ್ಲದೆ ನಿಮ್ಮ ಫೋನ್ ಅನ್ನು ನಿಯಂತ್ರಿಸಬಹುದು. ಹೀಗಾಗಿ ದಯವಿಟ್ಟು ಮೊಬೈಲ್ ಬಳಕೆದಾರರು ಬ್ಲೂಟೂತ್ ಉಪಯೋಗ ಪಡೆದ ಬಳಿಕ ಇದನ್ನು ಆಫ್ ಮಾಡುವುದು ಉತ್ತಮ.