Home News Bengaluru: ದೊಡ್ಡವರೆಂದು ಕಾಲು ಮುಟ್ಟಿ ನಮಸ್ಕರಿಸಿದ ಶಾಸಕನ ಪತ್ನಿ- ಹಿಂಬಾಗವನ್ನು ಸವರಿ, ಗಿಂಟಿದ ಕರ್ನಾಟಕದ ಹಿರಿಯ...

Bengaluru: ದೊಡ್ಡವರೆಂದು ಕಾಲು ಮುಟ್ಟಿ ನಮಸ್ಕರಿಸಿದ ಶಾಸಕನ ಪತ್ನಿ- ಹಿಂಬಾಗವನ್ನು ಸವರಿ, ಗಿಂಟಿದ ಕರ್ನಾಟಕದ ಹಿರಿಯ ಬಿಜೆಪಿ ನಾಯಕ !!

Hindu neighbor gifts plot of land

Hindu neighbour gifts land to Muslim journalist

Bengaluru: ರಾಜ್ಯ ಬಿಜೆಪಿ ನಾಯಕರ ಮೇಲೆ ಆಗಾಗ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಕ ಲೈಂಗಿಕ ಆರೋಪದ ಪಿಡುಗು ಬಿಜೆಪಿ ವರಿಷ್ಠರನ್ನೂ ಬಿಟ್ಟಿಲ್ಲ. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಬ್ಬ ರಾಜ್ಯ ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.

ಇದು ಒಂದು ರೀತಿಯ ಬಹಿರಂಗವಾಗಿ ಹಾಗೂ ವಿಚಿತ್ರವೆನಿಸುವಂತೆ ನಡೆದ ಪ್ರಸಂಗ. ಇದನ್ನು ಕೇಳಿದ ಬಳಿಕ ನಿಮಗೂ ಹಾಗನ್ನಿಸಬಹುದು. ಹೌದು… ಅಷ್ಟಕ್ಕೂ ನಡೆದದ್ದೇನು ಅಂದರೆ ಬಿಜೆಪಿ ಶಾಸಕರೊಬ್ಬರು ಇತ್ತೀಚೆಗೆ ರಾಜ್ಯ ಬಿಜೆಪಿಯ ಹಿರಿಯ ಮುಖಂಡರೊಬ್ಬರ ಭೇಟಿಗಾಗಿ ಬೆಂಗಳೂರಿನಲ್ಲಿ(Bengaluru)ರುವ ಅವರ ಮನೆಗೆ ಹೋಗಿದ್ದರು. ಆಗ ಶಾಸಕರ ಜತೆ ಅವರ ಪತ್ನಿ ಕೂಡ ಇದ್ದರು. ಹಿರಿಯ ಮುಖಂಡರು ಎದುರಾಗುತ್ತಿದ್ದಂತೆ ಶಾಸಕರು ಶಿರಬಾಗಿ ನಮಸ್ಕರಿಸಿದರು. ಬಳಿಕ ಶಾಸಕರ ಪತ್ನಿ ಬಾಗಿ ಆ ಹಿರಿಯ ಮುಖಂಡರ ಕಾಲು ಮುಟ್ಟಿ ನಮಸ್ಕರಿಸಲು ಹೋದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಆಶೀರ್ವಾದ ಮಾಡುವ ನೆಪದಲ್ಲಿ ಶಾಸಕರ ಪತ್ನಿಯ ಹಿಂಭಾಗವನ್ನು ಮೆಲ್ಲಗೆ ಸವರುತ್ತ ನಿಧಾನವಾಗಿ ಗಿಂಟಿಬಿಟ್ಟಿದ್ದಾರೆ.

ಬಿಜೆಪಿ(BJP) ಹಿರಿಯ ನಾಯಕರ ಈ ವರ್ತನೆ ಕಂಡ ತಕ್ಷಣ ಶಾಸಕರ ಪತ್ನಿ ಕೂಡಲೇ ಹಾವು ತುಳಿದಂತೆ ಹೌಹಾರಿ ಹಿಂದೆ ಸರಿದಿದ್ದಾರೆ. ತಾವು ಅತಿಯಾಗಿ ಗೌರವಿಸುತ್ತಿದ್ದ ನಾಯಕನ ಈ ಅನಿರೀಕ್ಷಿತ ನಡವಳಿಕೆ ಕಂಡು ಶಾಸಕರೂ ಬೆಚ್ಚಿ ಬಿದ್ದರು ಎನ್ನಲಾಗಿದೆ. ಅವಮಾನದಿಂದ ಶಾಸಕರ ಪತ್ನಿ ಹಾಗೂ ಶಾಸಕರು ರೊಚ್ಚಿಗೆದ್ದಿದ್ದು, ಇಬ್ಬರೂ ಸೇರಿ ಆ ʼಗೌರವಾನ್ವಿತʼ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಂದೆಯ ಸಮಾನ ಎಂದು ಭಾವಿಸಿ ಪಾದ ಮುಟ್ಟಿ ನಮಸ್ಕರಿಸಲು ಹೋದರೆ ನೀವು ಹೀಗೆ ಮಾಡಬಹುದೇ ಸರ್‌ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆಗ ಆ ಹಿರಿಯ ಮುಖಂಡರು, ‘ಹಾಗಲ್ಲಮ್ಮ.. ಒಳ್ಳೆಯದಾಗಲಿ ಎಂದು ನಾನು ಮುಟ್ಟಿ ಆಶೀರ್ವಾದ ಮಾಡಿದೆ ಅಷ್ಟೆ. ತಪ್ಪು ಭಾವಿಸಬೇಡ’ ಎಂದು ಸಮಾಧಾನ ಮಾಡಲು ಯತ್ನಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪಕ್ಷದ ನಾಯಕರೊಬ್ಬರು ಮಾಹಿತಿ ನೀಡಿದ್ದು, ಇದು ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಆ ರಾಜ್ಯ ಮುಖಂಡ ಯಾರು, ಅವರನ್ನು ಭೇಟಿಯಾಗಲು ಬಂದ ಶಾಸಕ ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ.