Home News MLA Sangamesh: ಹಬ್ಬ ನೋಡಿ ಖುಷಿಯಿಂದ ಹೇಳಿದೆ, ನನ್ನ ಮಾತನ್ನು ತಿರುಚಲಾಗಿದೆ-ಕಾಂಗ್ರೆಸ್‌ ಶಾಸಕ ಸಂಗಮೇಶ್‌

MLA Sangamesh: ಹಬ್ಬ ನೋಡಿ ಖುಷಿಯಿಂದ ಹೇಳಿದೆ, ನನ್ನ ಮಾತನ್ನು ತಿರುಚಲಾಗಿದೆ-ಕಾಂಗ್ರೆಸ್‌ ಶಾಸಕ ಸಂಗಮೇಶ್‌

Hindu neighbor gifts plot of land

Hindu neighbour gifts land to Muslim journalist

MLA Sangamesh: “ನಾನು ಮುಸಲ್ಮಾನರ ಹಬ್ಬವನ್ನು ನೋಡಿ ಖುಷಿಯಾಗಿ ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಬೇಕು ಎಂದು ಹೇಳಿದ್ದೇನೆಯೇ ಹೊರತು ಬೇರೆ ಅರ್ಥದಲ್ಲಿ ಅಲ್ಲ. ನಾನು ಆಡಿರುವ ಮಾತನ್ನು ತಿರುಚಲಾಗಿದೆ, ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರು ಬುಧವಾರ ಭದ್ರಾವತಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ​​​ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:G Parameshwar: ABVP ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ

ಇತ್ತೀಚೆಗೆ ನಡೆದ ಮುಸ್ಲಿಮರ ಈದ್‌ ಮಿಲಾದ್‌ ಹಬ್ಬದ ಸಂದರ್ಭದಲ್ಲಿ ಮಾತನಾಡಿದ್ದ ಕೈ ಶಾಸಕ ಬಿ.ಕೆ.ಸಂಗಮೇಶ್‌ ನಾನು ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಲು ಮುಸಲ್ಮಾನ ಬಾಂಧವರು ಕಾರಣ. ಮುಂದಿನ ದಿನಗಳನ್ನು ನನ್ನ ಮಗನ ಮೇಲೂ ನಿಮ್ಮ ಆಶೀರ್ವಾದ ಹೀಗೆಯೇ ಇರಲಿ ಎಂದು ಮನವಿ ಮಾಡಿದರು.