Home News U T Khadar: ಯುಟಿ ಖಾದರ್ ಗೆ ಮಂತ್ರಿ ಪಟ್ಟ? ಮುಂದಿನ ಸ್ಪೀಕರ್ ಯಾರು?

U T Khadar: ಯುಟಿ ಖಾದರ್ ಗೆ ಮಂತ್ರಿ ಪಟ್ಟ? ಮುಂದಿನ ಸ್ಪೀಕರ್ ಯಾರು?

Hindu neighbor gifts plot of land

Hindu neighbour gifts land to Muslim journalist

U T Khadar: ಕರಾವಳಿ ಭಾಗದಲ್ಲಿ ಉತ್ತಮ ರಾಜಕೀಯ ನಾಯಕನಾಗಿ ಗುರುತಿಸಿಕೊಂಡು ಮಂತ್ರಿಯಾಗಿ ಇದೀಗ ಕರ್ನಾಟಕ ವಿಧಾನಸಭಾ ಸ್ಪೀಕರ್ ಆಗಿರುವ ಯುಟಿ ಖಾದರ್ ಅವರಿಗೆ ಮತ್ತೆ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಪಟ್ಟ ಗಿಟ್ಟುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಮುಂದಿನ ಸ್ಪೀಕರ್ ಯಾರು ಎಂಬ ಚರ್ಚೆಗಳು ಕೂಡ ಗರಿಗೆದರಿವೆ.

ಹೌದು, ಹೈಕಮಾಂಡ್ ಸೂಚನೆಯಂತೆ ಇದೀಗ ಸಿದ್ದರಾಮಯ್ಯ ಸರ್ಕಾರಕ್ಕೆ ಮೇಜರ್ ಸರ್ಜರಿ ನಡೆಯಲಿದ್ದು ಸಂಪುಟ ಪುನರ್ ರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿರುವ ಯುಟಿ ಖಾದರ್ ಅವರಿಗೆ ಇದೀಗ ಮಂತ್ರಿಗಿರಿ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿದ್ದು ಸಂಪುಟದಲ್ಲಿ ರಹೀಂಖಾನ್ ಬದಲಿಗೆ ಸ್ಪೀಕರ್ ಯು.ಟಿ.ಖಾದರ್ (UT Khader) ಸಂಪುಟ ಸೇರುವ ನಿರೀಕ್ಷೆ ಇದೆ.

ಇದನ್ನೂ ಓದಿ:Smruthi Mandana: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂದಾನ !! ಊಹಿಸಲಾಗದಂತಹ ಸಾಧನೆಗೈದ ಛಲಗಾತಿ

ಅಂದಹಾಗೆ ಯು ಟಿ ಖಾದರ್ ಮತ್ತೆ ಸಿದ್ದರಾಮಯ್ಯ ಸಂಪುಟ ಸೇರುವುದು ಪಕ್ಕಾ ಎನ್ನಲಾಗುತ್ತಿದೆ. ಆಗ ಎಚ್​.ಕೆ ಪಾಟೀಲ್ ಇಲ್ಲವೇ ಟಿ ಬಿ ಜಯಚಂದ್ರರನ್ನು ಸಂಪುಟಕ್ಕೆ ಸೇರಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.