Home News Milk Packet : ಹಾಲಿನ ಪ್ಯಾಕೆಟ್ ಗಳನ್ನು ಈ ರೀತಿ ಯೂಸ್ ಮಾಡಿ – ಹಲ್ಲಿ,...

Milk Packet : ಹಾಲಿನ ಪ್ಯಾಕೆಟ್ ಗಳನ್ನು ಈ ರೀತಿ ಯೂಸ್ ಮಾಡಿ – ಹಲ್ಲಿ, ಜಿರಲೆ, ಇಳಿಗಳನ್ನು ಗಳನ್ನು ಮನೆಯಿಂದ ಓಡಿಸಿ

Hindu neighbor gifts plot of land

Hindu neighbour gifts land to Muslim journalist

Milk Packet : ಮನೆಯಲ್ಲಿ ಹಾಲಿನ ಪ್ಯಾಕೆಟ್ ಗಳನ್ನು ಎಸೆಯುವ ಬದಲು ಈ ರೀತಿ ಯೂಸ್ ಮಾಡಿದರೆ ಹಲ್ಲಿ, ಜಿರಲೆ, ಇಲಿಗಳು ಯಾವುದೂ ಕೂಡ ನಿಮ್ಮ ಮನೆಯಲ್ಲಿ ಇರುವುದಿಲ್ಲ. ಹಾಗಿದ್ದರೆ ಆ ಟ್ರಿಕ್ಸ್ ಯಾವುದು? ಹಾಲಿನ ಪ್ಯಾಕೆಟ್ ಗಳನ್ನು ಯಾವ ರೀತಿ ಬಳಸಬೇಕು ಎಂಬುದನ್ನು ನೋಡೋಣ.

ಹೌದು, ಕೆಲವರ ಮನೆಯಲ್ಲಿ ಹಲ್ಲಿ, ಜಿರಲೆ ಹಾಗೂ ಇಲಿಗಳ ಕಾಟ ತುಂಬಾ ವಿಪರೀತವಾಗಿರುತ್ತದೆ. ಇವುಗಳನ್ನು ಓಡಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡಿದರು ಕೂಡ ಏನೂ ಪ್ರಯೋಜನವಾಗಿರುವುದಿಲ್ಲ. ಹಾಗಿದ್ರೆ ಇನ್ನು ಮುಂದೆ ಯಾವ ಸರ್ಕಸ್ ಕೂಡ ಮಾಡುವ ಅಗತ್ಯವಿಲ್ಲ. ಯಾಕೆಂದರೆ ನೀವು ಹಾಲಿನ ಪ್ಯಾಕೆಟ್ ನಿಂದಲೇ ಇವುಗಳೆಲ್ಲವನ್ನು ಮನೆಯಿಂದ ಆಚೆ ಹಾಕಬಹುದು. ಈ ಬಗ್ಗೆ ಎರಡು ಉಪಯುಕ್ತ ಸಲಹೆಗಳನ್ನು ಅಮ್ಮು ಶಿಖೈಲ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಇವರು ಹೇಳಿದ ರೀತಿಯಲ್ಲಿ ಹಾಲಿನ ಪ್ಯಾಕೆಟ್ ಉಪಯೋಗಿಸುವುದರಿಂದ ಕೀಟಗಳು ಅಥವಾ ಇಲಿಗಳು ಪ್ಲಾಸ್ಟಿಕ್ ಕವರ್‌ ಸೇವಿಸಿ ಸಾಯುತ್ತವೆ. ಹಾಗಿದ್ರೆ ಆ ವಿಧಾನವನ್ನು ನೋಡೋಣ.

ಒಂದು ಬಟ್ಟಲಿನಲ್ಲಿ ಚಿಕ್ಕ ಚೂರುಗಳಾಗಿ ಕಟ್‌ ಮಾಡಿದ ಹಾಲಿನ ಕವರ್ ಎತ್ತಿಟ್ಟುಕೊಳ್ಳಿ. ಇದಕ್ಕೆ ಅರ್ಧ ಚಮಚ ಅಡುಗೆ ಸೋಡಾ ಮತ್ತು ಪುಡಿಮಾಡಿದ ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ಈ ಮಿಶ್ರಣವನ್ನು ಬೇಡವಾದ ಸಣ್ಣ ಮುಚ್ಚಳದಲ್ಲಿ ಅಥವಾ ತಟ್ಟೆಯಲ್ಲಿ ಹಾಕಿ. ನಂತರ ಹಲ್ಲಿಗಳು ಮತ್ತು ಜಿರಲೆಗಳು ಹೆಚ್ಚು ಚಲಿಸುವ ಸ್ಥಳಗಳಲ್ಲಿ (ಗ್ಯಾಸ್ ಸ್ಟವ್ ಕೆಳಗೆ, ವಾಷಿಂಗ್ ಮಷಿನ್ ಬಳಿ, ದಿನಸಿ ಡಬ್ಬಿಯ ಬಳಿ) ಇಡಬಹುದು. ಹಲ್ಲಿಗಳು ಮತ್ತು ಜಿರಳೆಗಳು ಇದನ್ನು ಸ್ವಲ್ಪ ತಿಂದರೂ ಸಾಯುತ್ತವೆ.

ಇದಲ್ಲದೆ ಇನ್ನೊಂದು ವಿಧಾನವೂ ಇದೆ. ಈ ವಿಧಾನದಲ್ಲಿ ಕಡಲೆ ಹಿಟ್ಟು ಮತ್ತು ಬೆಲ್ಲದ ಪುಡಿ ಸೇರಿಸಿ ಮಿಶ್ರಣ ಮಾಡಿ. ನೀರು ಸೇರಿಸಬೇಡಿ. ಬದಲಿಗೆ ಅಡುಗೆ ಎಣ್ಣೆಯನ್ನು ಸೇರಿಸಿ. ನಂತರ ಉಂಡೆ ಕಟ್ಟಿ. ಇದು ಸ್ವಲ್ಪ ದಪ್ಪವಾಗುವವರೆಗೆ ಬೆರೆಸಿಕೊಳ್ಳಿ. ಈ ಎಣ್ಣೆಯ ವಾಸನೆಯು ಇಲಿಗಳನ್ನು ಆಕರ್ಷಿಸುತ್ತದೆ. ಆ ನಂತರ ಉಂಡೆಯ ಮಧ್ಯದಲ್ಲಿ ಸಣ್ಣ ರಂಧ್ರ ಮಾಡಿ. ಇದರಲ್ಲಿ ಹಾಲಿನ ಪ್ಯಾಕೆಟ್ ತುಂಡುಗಳನ್ನು ಹಾಕಿ. ಮತ್ತೆ ಉಂಡೆಯನ್ನು ಮುಚ್ಚಿ. ಈ ಉಂಡೆಗಳನ್ನು ಇಲಿಗಳು ಓಡಾಡುವ ಸ್ಥಳಗಳಲ್ಲಿ ಇರಿಸಿ. ಅವುಗಳು ಇದನ್ನು ತಿಂದರೆ ಆ ದಿನ ಇಲಿಗಳು ಸಾಯುತ್ತವೆ ಅಥವಾ ಮನೆಯಿಂದ ಓಡಿಹೋಗುತ್ತವೆ.