

ಉತ್ತರ ಯುರೋಪ್‌ನ ನಾರ್ವೆ ದೇಶದ ಮಾಜಿ ಸಚಿವ ಎರಿಕ್ ಸೊಲ್ಹೆಮ್ ಅವರು ಮರವಂತೆಯ ಸಮುದ್ರ ತೀರದ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಎರಿಕ್ ಸೊಲ್ಹೆಮ್ ಅವರು ನಾರ್ವೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಸಲಹೆಗಾರ ರಾಗಿದ್ದು
ಬೇರೆ ಬೇರೆ ದೇಶಗಳ ವಿಶೇಷ ಎನಿಸುವ ಚಿತ್ರ, ವೀಡಿಯೊ ತುಣುಕುಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಶೇರ್ ಮಾಡಿಕೊಂಡಿದ್ದು ಈಗ
ಮರವಂತೆಯ ಚಿತ್ರವನ್ನು ಸೈಕಲಿಂಗ್ ಮಾಡಬಹುದಾದ ವಿಶ್ವದ ಅತ್ಯಂತ ಚಂದದ ರಸ್ತೆ, ಭಾರತದ ಉಡುಪಿ ಜಿಲ್ಲೆಯ ಮರವಂತೆಯಲ್ಲಿದೆ ಎಂದು ತಮ್ಮ ಸಾಮಾಜಿಕ ಜಾಕತಾಣದಲ್ಲಿ ಹಂಚಿಕೊಂಡಿದ್ದಾರೆ.













