Home News Mangaluru: ನಿಡ್ಡೋಡಿ ಮಹಿಳೆಯ ಹತ್ಯೆ ಪ್ರಕರಣ; ಆರೋಪಿ ಖುಲಾಸೆ!

Mangaluru: ನಿಡ್ಡೋಡಿ ಮಹಿಳೆಯ ಹತ್ಯೆ ಪ್ರಕರಣ; ಆರೋಪಿ ಖುಲಾಸೆ!

Hindu neighbor gifts plot of land

Hindu neighbour gifts land to Muslim journalist

Mangaluru: ನಿಡ್ಡೋಡಿಯ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಆರೋಪಿ ಶೇಖರ ಶೆಟ್ಟಿಯನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಖುಲಾಸೆ ಮಾಡಿದೆ.

ಜ.12,2016 ರಂದು ನಿಡ್ಡೋಡಿಯ ಯಮುಲ ಮನೆ ನಿವಾಡಿ ರೇವತಿ ನಿಡ್ಡೋಡಿಗೆ ಹೋಗಿ ಬರುವೆನೆಂದು ಮನೆಯಿಂದ ಹೋಗಿದ್ದು, ವಾಪಾಸು ಬಂದಿರಲಿಲ್ಲ. ನಂತರ ಅಣ್ಣ ತಿಮ್ಮಪ್ಪ ಮಡಿವಾಳ ದೂರು ನೀಡಿದ ಪ್ರಕಾರ ಮೂಡುಬಿದಿರೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಶುಂಠಿಲ ಪದವಿನ ನಿವಾಸಿ ಶೇಖರ ಶೆಟ್ಟಿ ಮೇಲೆ ಸಂಶಯವಿರುವುದಾಗಿ ಹೇಳಲಾಗಿತ್ತು. ನಂತರ ಶೇಖರ ಅವರನ್ನು ವಿಚಾರಣೆ ಮಾಡಿದರೂ ಯಾವುದೇ ಮಾಹಿತಿ ನೀಡಿರಲಿಲಲ್.‌ ಈ ಮಧ್ಯೆ ಶೇಖರ ಶೆಟ್ಟಿ ಮನೆಯನ್ನು ಬಿಟ್ಟು ಹೋಗಿದ್ದು, ಈ ಕುರಿತು ಅವರ ಪತ್ನಿ ದಯಾವತಿಯವರು ಶೇಖರ ಶೆಟ್ಟಿ ಕಾಣೆಯಾದ ಕುರಿತು ಪ್ರಕರಣ ದಾಖಲು ಮಾಡಿದ್ದರು.

2016, ಜ.18 ರಂದು ಶೇಖರ ಶೆಟ್ಟಿ ಠಾಣೆಗೆ ಹಾಜರಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ರೇವತಿ ಬೀಡಿ ಬ್ರಾಂಚಿಗೆಂದು ಶುಂಠಿಲ ಪದವಿಗೆ ಬರುತ್ತಿರುವಾಗಿ ಪರಿಚಯವಾಗಿದ್ದು, ಅನ್ಯೋನ್ಯವಾಗಿದ್ದರು. ಶೇಖರ್‌ಗೆ ಹಣದ ಸಮಸ್ಯೆ ಉಂಟಾದಾಗ ರೇವತಿಯ ಬಂಗಾರವನ್ನು ಪಡೆದು ಅಡವಿಟ್ಟು ಸಾಲ ಪಡೆಯುತ್ತಿದ್ದ. 2015 ರ ನವೆಂಬರ್‌ನಲ್ಲಿ ಕೂಡಾ ರೇವತಿ ಸರವನ್ನು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದ. ಆ ಚಿನ್ನದ ಸರ ಬಿಡಿಸಿಕೊಡುವಂತೆ ರೇವತಿ ಒತ್ತಡ ಹಾಕಿದ್ದರಿಂದ 2016, ಜ.12 ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಪಡ್ಡಗುರಿಗೆ ಕರೆದುಕೊಂಡು ಹೋಗಿ ರೇವತಿಯ ಶವವನ್ನು ತೋರಿಸಿದ್ದ ಎಂದು ವರದಿಯಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಪರ ವಕೀಲರು, ಡಿಎನ್‌ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಟಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ಎಂದು ವರದಿ ನೀಡಿತ್ತು. ಈ ಕಾರಣದಿಂದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಮನಗಂಡು ನ್ಯಾಯಾಲಯವು ಆರೋಪಿಯನ್ನು ಖುಲಾಸೆ ಮಾಡಿದೆ.