Home News Mangaluru: ಮಂಗಳೂರು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

Mangaluru: ಮಂಗಳೂರು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

SSLC

Hindu neighbor gifts plot of land

Hindu neighbour gifts land to Muslim journalist

Mangaluru: 2025 ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಮಾರ್ಚ್‌ 21 ರಿಂದ ಎ.4ರ ವರೆಗೆ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಆ ದಿನಗಳಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.

 

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ವಸ್ತ್ರಧರಿಸ ಬಾರದು.

ಪರೀಕ್ಷಾ ಕೇಂದ್ರದಲ್ಲಿ ಫ್ರಿಸ್ಕಿಂಗ್‌ ನಡೆಸುವ ಸಿಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ಸಂವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೊಳಗಬೇಕು. ಪರೀಕ್ಷೆಗೆ ಹಾಜರಾಗುವವರು ಹ್ಯಾಂಡ್‌ ಹೆಲ್ಡ… ಮೆಟಲ್‌ ಡಿಟೆಕ್ಟರ್‌ ತಪಾಸಣೆಗೆ ಒಳಗಾಗಬೇಕು. ಮೆಟಲ್‌ ವಾಟರ್‌ ಬಾಟಲ್ಸ್ ಅಥವಾ ನಾನ್‌ ಟ್ರಾನ್‌ಸ್ಪರೆಂಟ್‌ ವಾಟರ್‌ ಬಾಟಲ್‌ಗ‌ಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್‌/ ಸೆಲ್ಯುಲರ್‌ಫೋನ್‌, ಟ್ಯಾಬ್ಲೆಟ್‌, ಪೆನ್‌ಡ್ರೆöವ್‌, ಬ್ಲೂಟೂತ್‌ ಡಿವೈಸ್‌, ಸ್ಮಾರ್ಟ್‌ ವಾಚ್‌, ಕ್ಯಾಲ್ಕುಲೇಟರ್‌ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಉಪಕರಣಗಳು ಅಥವಾ ಲಾಗ್‌ ಟೇಬಲ್ಸ…, ಕೈಚೀಲ, ಪರ್ಸ್‌, ನೋಟು, ಟಾರ್ಚ್‌, ರೆಕಾರ್ಡಿಂಗ್‌ ವಸ್ತುಗಳನ್ನೂ ಸೇರಿದಂತೆ ಇನ್ನಿತರ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಹಿಯರಿಂಗ್‌ ಏಡ್‌ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡಬೇಕಾದುದು ಕಡ್ಡಾಯ.

 

ಕರ್ನಾಟಕ ಲೋಕ ಸೇವಾ ಆಯೋಗವು ತನ್ನ ಪರೀಕ್ಷೆಯ ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ತಿಳಿಸಿರುವ ವಸ್ತ್ರ ಸಂಹಿತೆಯೇ ಈ ಪರೀಕ್ಷೆಗೂ ಅನ್ವಯವಾಗಲಿದೆ ಎಂದು ಉಭಯ ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.