Home News Mangalore: ಕೂಳೂರು ಸೇತುವೆ-ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ: ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ

Mangalore: ಕೂಳೂರು ಸೇತುವೆ-ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ: ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

Mangalore: ಕೂಳೂರು: ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೆ ಸೇತುವೆಯ ಬಳಿಯ ಕೆಐಒಸಿಎಳ್‌ ಜಂಕ್ಷನ್‌ನಿಂದ ಅಯ್ಯಪ್ಪ ಗುಡಿಯವರೆಗೆ ಜು.25 ರವರೆಗೆ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಬದಲಿ ಮಾರ್ಗಗಳನ್ನು ಸೂಚನೆ ಮಾಡಲಾಗಿದೆ.

ಕಾಮಗಾರಿ ಜು.22 ರಂದು ರಾತ್ರಿ ಆರಂಭವಾಗಿ ಜು.25 ರ ಬೆಳಗ್ಗೆ 8 ರವರೆಗೆ ನಡೆಯಲಿದೆ. ಮಂಗಳೂರಿನಿಂದ ಉಡುಪಿಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಕೋಡಿಕಲ್‌ ಕ್ರಾಸ್‌ನಿಂದ ಕೆಐಒಸಿಎಲ್‌ ಜಂಕ್ಷನ್‌ವರೆಗೆ, ಪಣಂಬೂರು ಜಂಕ್ಷನ್‌ನಿಂದ ಕೆಐಒಸಿಎಲ್‌ ಜಂಕ್ಷನ್‌ವರೆಗೆ ಸಂಚಾರ ದಟ್ಟಣೆ ಹೆಚ್ಚಾಗಬಹುದು.

ಹೀಗಾಗಿ ಕೆಐಒಸಿಎಲ್‌ ಜಂಕ್ಷನ್‌ ಬಳಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಹೊಸ ಸೇತುವೆ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಚಲಿಸಲು ಸೂಚಿಸಲಾಗಿದೆ. ಬೆಳಗ್ಗೆ, ಸಂಜೆ ಸದರಿ ಮಾರ್ಗದಲ್ಲಿ ವಾಹನ ಸಂಚಾರವನ್ನು ತಪ್ಪಿಸಲು ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ.

ಉಡುಪಿ ಕಡೆಯಿಂದ ಬೆಂಗಳೂರು, ಮೈಸೂರು ಕಡೆಗೆ ಚಲಿಸುವ ಎಲ್ಲಾ ವಿಧದ ಲಘು ವಾಹನ ಹಾಗೂ ಲಾರಿಗಳು ಪಡುಬಿದ್ರಿ ಕಡೆಯಿಂದ ಕಾರ್ಕಳ ಮೂಡುಬಿದಿರೆ ಮಾರ್ಗವಾಗಿ ಸಂಚರಿಸಬೇಕು.

ಉಡುಪಿ/ಮೂಲ್ಕಿ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಮೂಲ್ಕಿ ವಿಜಯ ಸನ್ನಿಧಿ ಬಳಿ ಎಡಕ್ಕೆ ತಿರುವು ತೆಗೆದುಕೊಂಡು ಕಿನ್ನಿಗೋಳಿ – ಕಟೀಲು – ಬಜಪೆ – ಮರವೂರು – ಕಾವೂರು ಮೂಲಕ ಮಂಗಳೂರು ಕಡೆಗೆ ಸಂಚರಿಸಬೇಕು.

ಮಂಗಳೂರು ನಗರ / ಕೊಟ್ಟಾರ ಚೌಕಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಕಾವೂರು- ಮರವೂರು – ಬಜಪೆ -ಕಟೀಲು – ಕಿನ್ನಿಗೋಳಿ – ಮೂಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸಬೇಕು.

ಬಿ.ಸಿ.ರೋಡ್, ಬೆಂಗಳೂರು ಹಾಗೂ ಮೈಸೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಲಾರಿ ಹಾಗೂ ಲಘು ವಾಹನಗಳು ಬಿಕರ್ನಕಟ್ಟೆ-ಕುಲಶೇಖರ – ವಾಮಂಜೂರು – ಕೈಕಂಬ – ಬಜಪೆ – ಕಟೀಲು – ಕಿನ್ನಿಗೋಳಿ – ಮೂಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸಬೇಕು.

– ಎಂಸಿಎಫ್, ಒಎನ್‌ಜಿಸಿ, ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿಎಲ್, ಟೋಟಲ್ ಗ್ಯಾಸ್, ಬಿಎಎಸ್ಎಫ್, ರಫ್ತಾರ್, ಏಜಿಸ್ ಇತ್ಯಾದಿ ಕಂಪೆನಿಗಳಿಗೆ ಬರುವ ಹಾಗೂ ಕಂಪೆನಿಯಿಂದ ಹೊರಡುವ ಎಲ್ಲಾ ರೀತಿಯ ಗ್ಯಾಸ್ ಟ್ಯಾಂಕರ್, ಡಿಸೇಲ್/ಪೆಟ್ರೋಲ್ ಟ್ಯಾಂಕರ್ ಹಾಗೂ ಇತರ ಘನ ವಾಹನಗಳು ಕೂಳೂರು ಹೊಸ ಸೇತುವೆಯಲ್ಲಿ ಸಂಚಾರ ದಟ್ಟಣೆಯ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.