Home News Jai Sriram Slogan: ಜೈಶ್ರೀರಾಮ್‌ ಎಂದ ವ್ಯಕ್ತಿಯ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

Jai Sriram Slogan: ಜೈಶ್ರೀರಾಮ್‌ ಎಂದ ವ್ಯಕ್ತಿಯ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

Jai Sriram Slogan

Hindu neighbor gifts plot of land

Hindu neighbour gifts land to Muslim journalist

Jai Sriram Slogan: ಜೈಶ್ರೀರಾಮ್‌ ಎಂದ ವ್ಯಕ್ತಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶೈನ್‌ ಬಾರ್‌ ನಲ್ಲಿ ಈ ಘಟನೆ ನಡೆದಿದೆ. ಮದ್ಯಸೇವನೆ ಮಾಡಿದ ನಂತರ ಜೈ ಶ್ರೀರಾಮ್‌ ಎಂದು ಹೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:  Karnataka Rain: ಬಿರು ಬೇಸಿಗೆಯ ನಡುವೆ ವರುಣನ ಕೃಪೆ; ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಶ್ರೀರಾಮ ನಗರದ ಕುಮಾರ್‌ ರಾಠೋಡ್‌ ಎಂಬುವರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ರಾಠೋಡ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾರ್‌ನಲ್ಲಿ ಜೈ ಶ್ರೀರಾಮ್‌ ಎಂದು ಕೂಗಿದ್ದಕ್ಕೆ 20 ಜನ ಮುಸ್ಲಿಂ ಯುವಕರು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ:  CAA: ಪೌರತ್ವ ಕಾಯಿದೆ ಜಾರಿ ತಡೆಯಲು ಸಾಧ್ಯವೇ ಇಲ್ಲ- ಗುಡುಗಿದ ಅಮಿತ್ ಶಾ