Home News ಬುರ್ಖಾ ಹಾಕದೆ ಹೊರಬಂದಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಕೊಂದ ವ್ಯಕ್ತಿ

ಬುರ್ಖಾ ಹಾಕದೆ ಹೊರಬಂದಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಕೊಂದ ವ್ಯಕ್ತಿ

Murder News

Hindu neighbor gifts plot of land

Hindu neighbour gifts land to Muslim journalist

ಲಕ್ನೋ: ಬುರ್ಖಾ ಧರಿಸದೆ ಮನೆಯಿಂದ ಹೊರಬಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯೊಳಗೆ ಹೂತುಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಫಾರೂಕ್‌ ಎಂಬಾತ ಮೂವರನ್ನು ಕೊಲೆ ಮಾಡಿ ಹೂತುಹಾಕಿದ್ದಾನೆ.

ಫಾರೂಕ್‌ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್‌ ಮತ್ತು ಸಹ್ರೀನ್‌ ಐದು ದಿನಗಳ ಕಾಲ ಕಾಣೆಯಾಗಿದ್ದು, ನಂತರ ಫಾರೂಕ್‌ ತಂದೆ ದಾವೂದ್‌ ಎಫ್‌ಐಆರ್‌ ದಾಖಲು ಮಾಡಿದ್ದರು. ಆಗ ಫಾರೂಕ್‌ನ ಹೇಳಿಕೆಯಲ್ಲಿ ಅನುಮಾನ ಉಂಟಾಗಿದ್ದನ್ನು ಪೊಲೀಸರು ಗಮನಿಸಿದ್ದು, ತೀವ್ರ ವಿಚಾರಣೆ ಮಾಡಿದಾಗ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ, ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು, ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಶವಗಳನ್ನು ಅಡಗಿಸಿಟ್ಟಿದ್ದಾಗಿ ಹೇಳಿದ್ದಾನೆ.

ನಂತರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲು ಮಾಡಿದರು.