Home News Belthangady : ಕುಗ್ರಾಮದ ತನ್ನ ಹೋಟೆಲ್ ಗೆ ವಿಭಿನ್ನ ರೀತಿಯ ಪ್ರಮೋಷನ್ ಕೊಟ್ಟ ಬೆಳ್ತಂಗಡಿ ವ್ಯಕ್ತಿ...

Belthangady : ಕುಗ್ರಾಮದ ತನ್ನ ಹೋಟೆಲ್ ಗೆ ವಿಭಿನ್ನ ರೀತಿಯ ಪ್ರಮೋಷನ್ ಕೊಟ್ಟ ಬೆಳ್ತಂಗಡಿ ವ್ಯಕ್ತಿ – ವಿಡಿಯೋ ಕಂಡು ನೆಟ್ಟಿಗರು ಫಿದಾ !!

Hindu neighbor gifts plot of land

Hindu neighbour gifts land to Muslim journalist

Belthangady : ಇಂದು ಸೋಶಿಯಲ್ ಮೀಡಿಯಾಗಳನ್ನು ಓಪನ್ ಮಾಡಿದರೆ ಸಾಕು ಸಣ್ಣ ಪುಟ್ಟ ಮಳಿಗೆಗಳ, ಹೋಟೆಲ್ ಗಳ ಅಥವಾ ಇನ್ಯಾವುದೋ ಪ್ರಾಡಕ್ಟ್ ಗಳ ಪ್ರಮೋಷನ್ ವಿಡಿಯೋಗಳೇ ಎದುರಿಗೆ ಬಂದುಬಿಡುತ್ತವೆ. ಇನ್ಸ್ಟಾಗ್ರಾಮ್ ಗಳಲ್ಲಂತೂ ಇವುಗಳ ಹಾವಳಿ ತಪ್ಪಿದ್ದಲ್ಲ. ಆದರೆ ಇದೆಲ್ಲದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ತನ್ನ ಊರಲ್ಲಿ ಪುಟ್ಟದಾಗಿ ತೆರೆದ ಹೋಟೆಲ್ ಒಂದಕ್ಕೆ ವಿಭಿನ್ನ ರೀತಿಯ ಪ್ರಮೋಷನ್ ಕೊಟ್ಟು ಸಾಕಷ್ಟು ಸುದ್ದಿಯಾಗುತ್ತಿದ್ದಾರೆ.

 

View this post on Instagram

 

A post shared by Praveen Douza (@praveendsouza301)

ಹೌದು, ಬೆಳ್ತಂಗಡಿ ತಾಲೂಕಿನ ಪನಕಜೆ ( Panakaje of Belthangady) ಎಂಬಲ್ಲಿ ಇರುವ ಸಣ್ಣದಾದ ಹೋಟೆಲ್‌ವೊಂದಕ್ಕೆ ನ್ಯೂಸ್ ಓದೋ ರೀತಿಯಲ್ಲಿ ವ್ಯಕ್ತಿಯೊಬ್ಬ ಪ್ರಮೋಷನ್ (Promotion)ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿತ್ತು. ಇದನ್ನು ಕಂಡು ಫೈವ್ ಸ್ಟಾರ್ ಹೋಟೆಲ್ ಗೂ ಕೂಡ ಈ ರೀತಿಯ ಪ್ರಮೋಷನ್ ಸಿಕ್ಕಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:Share Market: ಸರ್ಕಾರದ 2-ಸ್ಲ್ಯಾಬ್ ಜಿಎಸ್‌ಟಿ ರಚನೆ ವಿಚಾರ – ಭಾರಿ ಏರಿಕೆ ಕಂಡ ಭಾರತೀಯ ಷೇರು ಮಾರುಕಟ್ಟೆ

ಅಂದಹಾಗೆ praveendsouza301 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಸಣ್ಣದಾದ ಹೋಟೆಲ್ ಮುಂಭಾಗದಲ್ಲಿ ನಿಂತುಕೊಂಡಿದ್ದು, ಎರಡು ಕೈಮುಗಿದುಕೊಂಡು ಬೆಳ್ತಂಗಡಿ ತಾಲೂಕಿನ ಪನಕಜೆಯ ಎಂಬಲ್ಲಿ ಮಸೀದಿಯ ಹತ್ತಿರ ಹೋಟೆಲ್ ಇದೆ. ಈ ಹೋಟೆಲ್‌ಗೆ ಸುತ್ತಮುತ್ತಲಿನ ಹಳ್ಳಿಯ ಜನರು ಬರಬೇಕಾಗಿ ಕೇಳಿಕೊಳ್ಳುತ್ತೇನೆ. ಈ ಹೋಟೆಲ್‌ನಲ್ಲಿ ಗೋಳಿಬಜೆ, ಚಟ್ಟಂಬಡೆ, ಬಿಸ್ಕಟ್ ಅಬಂಡೆ, ಸಜ್ಜಿಗೆ ಬಜಿಲ್, ಊಟ, ಆಮ್ಲೆಟ್ ಎಲ್ಲಾ ಮಾಡಿ ಕೊಡಲಾಗುತ್ತದೆ. ಇಷ್ಟು ಹೇಳಿ ನಾನು ಮಾತುಗಳನ್ನು ಮುಗಿಸುತ್ತಿದ್ದೇನೆ, ಧನ್ಯವಾದಗಳು ಎಂದು ಹೇಳಿರುವುದನ್ನು ನೋಡಬಹುದು. ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಲಕ್ಷಗಟ್ಟಲೆ ವೀವ್ಸ್ ಕೂಡ ಪಡೆದುಕೊಂಡಿದೆ.