

Swallowing live Hen Chick: ಮಕ್ಕಳಿಲ್ಲದ ವ್ಯಕ್ತಿಯೊಬ್ಬ ಮಂತ್ರವಾದಿಯ ಬಳಿ ಹೋಗಿದ್ದು, ನಂತರ ಆತ ಸಾವಿಗೀಡಾಗಿದ್ದಾನೆ. ಇದಕ್ಕೆ ಕಾರಣ ಒಂದು ಕೋಳಿ. ಮಕ್ಕಳಿಲ್ಲವೆಂದು ವ್ಯಕ್ತಿ ಪರಿಹಾರಕ್ಕೆಂದು ಮಾಟ ಮಂತ್ರ ಮಾಡುವವನ ಬಳಿ ಹೋಗಿದ್ದು, ಆತ ಜೀವಂತ ಕೋಳಿ ಮರಿಯನ್ನು ನುಂಗಲು ಹೇಳಿದ್ದು, ಅದು ಗಂಟಲಿನಲ್ಲಿ ಸಿಕ್ಕಾಕಿಕೊಂಡಿದ್ದು, ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ವ್ಯಕ್ತಿ ಅಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ನಡೆದಿರುವುದು ಛತ್ತೀಸ್‌ಗಢದ ಅಂಬಿಕಾಪುರದಲ್ಲಿ.
ಮಂತ್ರವಾದಿ ಕೊಟ್ಟ ಕೋಳಿ ಮರಿಯನ್ನು ವ್ಯಕ್ತಿ ಜೀವಂತವಾಗಿ ನುಂಗಿದ್ದು, ಅದು ಕತ್ತಿನಲ್ಲಿ ಸಿಲುಕಿದ್ದು, ಉಸಿರಾಟಲು ಆಗದೇ ಇದ್ದ ಕಾರಣ, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ ಕುಟುಂಬದವರು ಅಲ್ಲಿ ಆತ ಬಿದ್ದು ಅಸ್ವಸ್ಥಗೊಂಡಿದ್ದಾನೆ ಎಂದು ಹೇಳಿದ್ದಾರೆ.
ಮೊದಲು ಮನೆಮಂದಿ ಆತನ ಮನೆಯ ಸಮೀಪ ಬಾವಿಯೊಂದು ಇದ್ದಿದ್ದು, ಅಲ್ಲಿ ಸ್ನಾನ ಮಾಡಲೆಂದು ಹೋಗಿದ್ದ ವೇಳೆ ವಾಪಾಸು ಬರುವ ಸಮಯದಲ್ಲಿ ಇದ್ದಕ್ಕಿದ್ದಂತೆ ಬಿದ್ದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ಆತ ಸಾವನ್ನಪ್ಪಿದ್ದ ಎಂದು ಹೇಳಿದ್ದಾರೆ. ಮೃತ ವ್ಯಕ್ತಿಯ ಸಂಬಂಧಿಕರು ಮರಣೋತ್ತರ ಪರೀಕ್ಷೆಗೂ ಒಪ್ಪಿಗೆ ನೀಡಿರಲಿಲ್ಲ. ಆದರೆ ವೈದ್ಯರು ಈತನ ಸಾವಿನ ಬಗ್ಗೆ ಅನುಮಾನಪಟ್ಟಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ಕುಟುಂಬದವರು ಒಪ್ಪಿಗೆ ನೀಡಿದರು. ಈ ವೇಳೆ ಗಂಟಲಿನಲ್ಲಿ ಜೀವಂತ ಕೋಳಿ ಇರುವುದು ಪತ್ತೆಯಾಗಿದೆ.
ಈ ಘಟನೆ ಕುರಿತು ದರಿಮಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ಸಂದರ್ಭ ಆತನ ಮನೆಯವರು ಮಕ್ಕಳಿಲ್ಲದ ಕಾರಣ ಆತ ಚಿಂತಿತನಾಗಿದ್ದು ಹೀಗಾಗಿ ಮಂತ್ರವಾದಿಯ ಬಳಿಗೆ ಹೋದಾಗ ಆತ ಜೀವಂತ ಕೋಳಿ ಮರಿಯನ್ನು ನುಂಗಲು ಹೇಳಿದ್ದಾಗಿ ಹೇಳಿದರು.













