Home News Tamilnadu: ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಸಾವಿಗೀಡಾದ ವ್ಯಕ್ತಿ

Tamilnadu: ನೃತ್ಯ ಮಾಡುತ್ತಲೇ ವೇದಿಕೆಯಲ್ಲಿ ಕುಸಿದು ಸಾವಿಗೀಡಾದ ವ್ಯಕ್ತಿ

Hindu neighbor gifts plot of land

Hindu neighbour gifts land to Muslim journalist

Chennai: ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಶಾಲೆಯೊಂದರಲ್ಲಿ ಪುಸ್ತಕ ಮೇಳವನ್ನು ಆಯೋಜನೆ ಮಾಡಿದ್ದು, ಈ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ವೇದಿಕೆಯಲ್ಲಿ ನಡೆಯುತ್ತಿತ್ತು. ಈ ವೇಳೆ ನೃತ್ಯ ತಂಡದ ಜೊತೆ ರಾಜೇಶಕಣ್ಣನ್‌ ನೃತ್ಯ ಮಾಡಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿ ಪರಿಶೀಲನೆ ಮಾಡಿದ ವೈದ್ಯರು ರಾಜೇಶಕಣ್ಣನ್‌ ಮೃತ ಹೊಂದಿರುವುದಾಗಿ ಘೋಷಿಸಿದ್ದಾರೆ.