Home News Crime News: ಪ್ರೀತಿಸಿದ ಅತ್ತೆ ಮಗಳು ವಿವಾಹಕ್ಕೆ ಒಲ್ಲೇ ಎಂದಳು ; ಮನನೊಂದ ಪ್ರಿಯಕರ ಆಕೆಯ...

Crime News: ಪ್ರೀತಿಸಿದ ಅತ್ತೆ ಮಗಳು ವಿವಾಹಕ್ಕೆ ಒಲ್ಲೇ ಎಂದಳು ; ಮನನೊಂದ ಪ್ರಿಯಕರ ಆಕೆಯ ಮನೆಮುಂದೆಯೇ ಬೆಂಕಿ ಹಚ್ಚಿಕೊಂಡ!!

Man committed suicide
Source: news18

Hindu neighbor gifts plot of land

Hindu neighbour gifts land to Muslim journalist

Man committed suicide: ಪ್ರೀತಿಯಲ್ಲಿ ಬಿದ್ದವರು ಎಂತಹದೇ ಕಾರ್ಯಕ್ಕೂ ಹೇಸುವುದಿಲ್ಲ. ಕೆಲವರು ಪ್ರೀತಿಸಿ ವಿವಾಹವಾಗಲು ಆಗದೇ ಇದ್ದಾಗ ಆತ್ಮಹತ್ಯೆಯೂ (suicide) ಮಾಡಿಕೊಳ್ಳುತ್ತಾರೆ. ಅಂತಹ ಪ್ರಕರಣಗಳು ಅದೆಷ್ಟೋ ಬೆಳಕಿಗೆ‌ ಬಂದಿದೆ. ಇದೀಗ ಅಂತಹದೇ ಮನಕಲುಕುವ ಘಟನೆಯೊಂದು ರಾಜನ್ನ ಸಿರಿಸಿಲ್ಲ ಜಿಲ್ಲೆಯ (Rajanna Sircilla District) ಬೋಯಿನಪಲ್ಲಿ ಮಂಡಲದ ಸ್ತಂಭಪಲ್ಲಿಯಲ್ಲಿ ನಡೆದಿದೆ (Crime News). ಹೌದು, ರವಿತೇಜ (26) ಎಂಬ ಯುವಕ ಪ್ರೀತಿಸಿದ ಅತ್ತೆಮಗಳು ಮದುವೆ ಆಗಲ್ಲ ಎಂದಿದ್ದಕ್ಕೆ ಆಕೆಯ ಮನೆಮುಂದೆಯೇ ಪೆಟ್ರೋಲ್ (Man committed suicide)​ ಸುರಿದು, ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟಿದ್ದಾನೆ.

ಮೃತ ಯುವಕ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬ್ರಾಹ್ಮಣಪಲ್ಲಿ ಮಂಡಲದ ಜಕ್ರನ್​​ಪಲ್ಲಿಯ ಗಾಂಧಿ ನಗರ್ ನಿವಾಸಿ ಎಂದು ಹೇಳಲಾಗಿದೆ. ಈತ ರಾತ್ರಿ ವೇಳೆ ಗೂಡ್ಸ್​​ ವಾಹನದಲ್ಲಿ (Goods Vehicle) ಯುವತಿಯ ಮನೆಗೆ ಬಂದಿದ್ದು, ನಂತರ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕ ರವಿತೇಜ ತನ್ನ ಅತ್ತೆಯ ಮಗಳನ್ನು ಪ್ರೀತಿಸುತ್ತಿದ್ದನು. ಇವರಿಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅದೇಕೋ ಕೆಲದಿನಗಳಿಂದ ಯುವತಿ ಈತನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಈತನ ಕಾಲ್ (call), ಮೆಸೇಜ್ ತಿರಸ್ಕರಿಸುತ್ತಿದ್ದಳು. ನಂತರದಲ್ಲಿ ರವಿತೇಜ ಅತ್ತೆ ಮನೆಗೆ ಬಂದು ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ತೀವ್ರ ಮನನೊಂದ ಯುವಕ ಸೋಮವಾರ ಬೆಳಗ್ಗೆ 4 ಗಂಟೆಯ‌ ಹೊತ್ತಿಗೆ ಯುವತಿಯ ಮನೆಗೆ ಬಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಯುವಕನ ವರ್ತನೆಗೆ ಭಯಗೊಂಡ ಯುವತಿಯ ಕುಟುಂಬಸ್ಥರು, ಸ್ಥಳೀಯರು ಕೂಡಲೇ ಪೊಲೀಸರಿಗೆ (police) ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆ ವೇಳೆಗೆ ರವಿತೇಜ ಇಹಲೋಕ ತ್ಯಜಿಸಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

 

ಇದನ್ನು ಓದಿ: Kasaragod: ಉಯ್ಯಾಲೆ ಆಡುತ್ತಿದ್ದ ಬಾಲಕ ಸೀರೆ ಬಿಗಿದು ಮೃತ್ಯು!