Home News Death: ಸೌದಿಯಲ್ಲಿ ಮಲಯಾಳಿ ಜೋಡಿ ಅಪಘಾತದಲ್ಲಿ ಸಾವು

Death: ಸೌದಿಯಲ್ಲಿ ಮಲಯಾಳಿ ಜೋಡಿ ಅಪಘಾತದಲ್ಲಿ ಸಾವು

Hindu neighbor gifts plot of land

Hindu neighbour gifts land to Muslim journalist

Death: ಸೌದಿ ಅರೇಬಿಯಾದ ಪ್ರಸಿದ್ಧ ಪ್ರವಾಸಿ ತಾಣ ಅಲ್‌-ಉಲಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಲಿಯಾಳಿ ಜೋಡಿ, ನಿಶ್ಚಿತಾರ್ಥಗೊಂಡಿದ್ದ ಅಖಿಲ್‌ ಅಲೆಕ್ಸ್‌ (27) ಮತ್ತು ಟೀನಾ ಬೈಜು (26) ಸಾವಿಗೀಡಾಗಿದ್ದಾರೆ. ಇನ್ನೊಂದು ವಾಹನಕ್ಕೆ ಇವರ ವಾಹನ ಡಿಕ್ಕಿ ಹೊಡೆದಿದ್ದು, ತೀವ್ರ ಸ್ಫೋಟದಿಂದ ಎರಡು ವಾಹನಗಳು ಬೆಂಕಿಗಾಹುತಿಯಾಗಿದೆ. ಈ ಅಪಘಾತದಲ್ಲಿ ಮೂವರು ಸೌದಿ ಪ್ರಜೆಗಳೂ ಸಾವಿಗೀಡಾಗಿದ್ದಾರೆ.

ಯುಕೆಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅಖಿಲ್‌ ಅಲೆಕ್ಸ್‌, ಮದೀನಾದಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಟೀನಾ ಬೈಜು ಅವರನ್ನು ಭೇಟಿ ಮಾಡಲೆಂದು ಸೌದಿಗೆ ಬಂದಿದ್ದರು. ಮದುವೆಯ ಪೂರ್ವ ಸಿದ್ಧತೆಗಾಗಿ ಭೇಟಿಯಾಗಿದ್ದಾಗ ಈ ದರುಂತ ನಡೆದಿದೆ.

ಇವರ ಮದುವೆ ಜೂನ್‌ 16 ರಂದು ಮದುವೆ ನಿಗದಿಯಾಗಿತ್ತು. ಕಾರಿನ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮೃತದೇಹಗಳನ್ನು ಗುರುತಿಸಲು ವಿಶೇಷ ಪರೀಕ್ಷೆ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಮೃತದೇಹಗಳನ್ನು ಕೇರಳದ ವಯನಾಡಿಗೆ ಕರೆತರುವ ಕಾರ್ಯಾಚರಣೆ ಆರಂಭವಾಗಿದೆ. ಮುಂದಿನ 10 ದಿನದಲ್ಲಿ ಮೃತದೇಹ ಅವರ ನಿವಾಸಕ್ಕೆ ತಲುಪುವ ಸಾಧ್ಯತೆ ಇದೆ.