Home News Bengaluru Stampede: ಕಾಲ್ತುಳಿತ ಪ್ರಕರಣದಲ್ಲಿ ಮೇಜರ್ ಟ್ವಿಸ್ಟ್ – ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಬೇಜವಬ್ದಾರಿಯಿಂದ...

Bengaluru Stampede: ಕಾಲ್ತುಳಿತ ಪ್ರಕರಣದಲ್ಲಿ ಮೇಜರ್ ಟ್ವಿಸ್ಟ್ – ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಬೇಜವಬ್ದಾರಿಯಿಂದ ನಡೆದು ಹೋಯ್ತಾ ದುರಂತ!

Hindu neighbor gifts plot of land

Hindu neighbour gifts land to Muslim journalist

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ ಪ್ರಕರಣ ಸಂಬಂಧ ಹೊಸ ಸುದ್ದಿಯೊಂದು ತನಿಖೆಯಿಂದ ಬಹಿರಂಗಗೊಂಡಿದೆ. ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಬೇಜವಬ್ದಾರಿಗೆ ಘೋರ ದುರಂತ ನಡೀತಾ? ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಗಿರೀಶ್ ನಿರ್ಲಕ್ಷ್ಯಕ್ಕೆ ಹೋಯ್ತಾ 11 ಪ್ರಾಣ ..? ಈ ಬಗ್ಗೆ ಸಿಐಡಿ ಪ್ರಾಥಮಿಕ ತನಿಖೆ ವೇಳೆ ಇನ್ಸ್ ಪೆಕ್ಟರ್ ನಿರ್ಲಕ್ಷ್ಯ ಬಹಿರಂಗವಾಗಿದೆ.

ಸಿಸಿಟಿವಿ ಪರಿಶೀಲನೆ ವೇಳೆ ಸತ್ಯ ಪತ್ತೆಯಾಗಿದೆ. ನಿನ್ನೆ ಸಿಐಡಿ ತನಿಖೆ ವೇಳೆ ಸಿಐಡಿ ಪ್ರಶ್ನೆಗೆ ಗಿರೀಶ್ ಕಕ್ಕಾಬಿಕ್ಕಿಬಿಕ್ಕಿಯಾದರು. ಮೈದಾನ ಗೇಟ್ ಬಳಿ ಬಂದೋಬಸ್ತ್ ಮಾಡೋದು ಬಿಟ್ಟು ಇನ್ಸ್ಪೆಕ್ಟರ್ ಎಲ್ಲಿ ಹೋಗಿದ್ರು? 1:30 ಕ್ಕೆ ಮೈದಾನದ ಬಳಿ ಸಿಬ್ಬಂದಿ ನಿಯೋಜನೆ ಮಾಡಲು ಕಬ್ಬನ್ ಪಾರ್ಕ್‌ ಇನ್ಸ್ಪೆಕ್ಟರ್ ಗೆ ಕಮಿಷನರ್ ಸೂಚಿಸಿದ್ದರು. ಸಿಬ್ಬಂದಿ ನಿಯೋಜನೆ ಜವಾಬ್ದಾರಿಯನ್ನು ಇನ್ಸ್ಪೆಕ್ಟರ್ ಗಿರಿಶ್ಗೆ ನೀಡಲಾಗಿತ್ತು. ಆದ್ರೆ ನಾಲ್ಕು ಗಂಟೆ ಆಗಿದ್ರೂ ಸರಿಯಾದ ಸಿಬ್ಬಂದಿ ನಿಯೋಜನೆ ಆಗಿರ್ಲಿಲ್ಲ.

ಸ್ಟೇಡಿಯಂ ಬಳಿ ಸಿಬ್ಬಂದಿ ನಿಯೋಜನೆ ಮಾಡೋದು ಬಿಟ್ಟು ಗಿರೀಶ್ ಎಲ್ಲಿ ಹೋಗಿದ್ರು? ವಿಧಾನಸೌಧ ಬಳಿ ಬಂದೋ ಬಸ್ತ್ ಗೆ ಎಸಿಪಿ ಡಿಸಿಪಿ ಹೋಗಿದ್ರು. ಆದ್ರೆ ಗಿರೀಶ್ ಎಲ್ಲಿ ಹೋಗಿದ್ರು ಎಂದು ಸಿಐಡಿ ಪ್ರಶ್ನೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಗೇಟ್ ಬಳಿ ಪೊಲೀಸ್ ಭದ್ರತೆ ಇಲ್ಲದಿರೋದು ಪತ್ತೆಯಾಗಿದ್ದು, ಈ ಬಗ್ಗೆ ನಿನ್ನೆ ಸಿಐಡಿ ಅಧಿಕಾರಿಗಳು ಇನ್ಸ್ ಪೆಕ್ಟರ್ ಗಿರೀಶ್ ಅವರಿಗೆ ಫುಲ್ ಡ್ರೀಲ್ ಮಾಡಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ,ಎಸಿಪಿ ವಿಧಾನಸೌಧ ಬಳಿ ತೆರಳಿ, ವಿಧಾನಸೌಧಕ್ಕೆ ಹೋಗುವ ಮುನ್ನ ಇನ್ಸ್ ಪೆಕ್ಟರ್ ಗಿರೀಶ್ ಗೆ ಸ್ಟೇಡಿಯಂ ಸುತ್ತಮುತ್ತ ಬಂದೋಬಸ್ತ್ ಕೈಗೊಳ್ಳುವಂತೆ ಸೂಚನೆ ನೀಡಿದ್ರು. ಆದರೆ ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಗಿರೀಶ್ ಬೇರೆ ಬೇರೆ ಸ್ಟೇಷನ್ ನಿಂದ ಬಂದ ಸಿಬ್ಬಂದಿಗೆ ಬಂದೋಬಸ್ತ್ ಗೆ ಹೇಳಿ ಅಲ್ಲಿಂದ ಜ್ಯೂಟ್ ಆಗಿದ್ರು. ಅವರ ಈ ನಿರ್ಲಕ್ಷ್ಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಸಿಐಡಿ ತಾಕೀತು ಮಾಡಿದೆ. ಈ ಇನ್ಸ್ಪೆಕ್ಟರ್ ನಿರ್ಲಕ್ಷ್ಯಕ್ಕೆ ಹಿರಿಯ ಅಧಿಕಾರಿಗಳ ತಲೆದಂಡವಾಯ್ತಾ ಎಂಬ ಪ್ರಶ್ನೆಯೀಗ ಎಲ್ಲರಲ್ಲೂ ಮೂಡಿದೆ.

ಇದನ್ನೂ ಓದಿ:ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ!