Home News LPG Cylinder Price : ನಿಮಗಿದು ತಿಳಿದಿರಲಿ ಎಲ್‌ಪಿಜಿ ಬೆಲೆ ಯಾವಾಗ ಕಡಿಮೆ ಆಗುತ್ತೆ ಎಂದು!

LPG Cylinder Price : ನಿಮಗಿದು ತಿಳಿದಿರಲಿ ಎಲ್‌ಪಿಜಿ ಬೆಲೆ ಯಾವಾಗ ಕಡಿಮೆ ಆಗುತ್ತೆ ಎಂದು!

Hindu neighbor gifts plot of land

Hindu neighbour gifts land to Muslim journalist

ಭಾರತದಲ್ಲಿ ಹಣದುಬ್ಬರ ಸಮಸ್ಯೆಗಳು ಹೆಚ್ಚುತ್ತಲೇ ಇದ್ದು ಇದರಿಂದ ಜನರ ಜೀವನ ಕ್ರಮ ಅಸ್ತವ್ಯಸ್ತ ಆಗಿದೆ. ಇದರ ಜೊತೆಗೆ ನಿರುದ್ಯೋಗ ಸಮಸ್ಯೆ. ಹೀಗಿರುವಾಗ ಜನರು ಕೆಲವೊಂದು ಬದಲಾವಣೆಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಅದಲ್ಲದೆ ಭಾರತದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ತೈಲ ಮತ್ತು ಅನಿಲ ಉತ್ಪಾದನೆ ಇಲ್ಲದಿರುವುದು ಈಗಾಗಲೇ ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆಗಾಗಿ ಹೊರ ದೇಶಗಳನ್ನು ಅವಲಂಬಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿನ ಏರಿಳಿತದಿಂದಾಗಿ, ಭಾರತದಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಏರುತ್ತ ಬರುತ್ತಿದೆ.

ಸದ್ಯ ಈಗಾಗಲೇ LPG ಸಿಲಿಂಡರ್ ಬಗ್ಗೆ ದೊಡ್ಡ ಮಾಹಿತಿ ದೊರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕಡಿಮೆಯಾದರೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದರು. ಅದಲ್ಲದೆ ಅಂತಾರಾಷ್ಟ್ರೀಯ ಇಂಧನ ಬೆಲೆ ಪ್ರತಿ ಮೆಟ್ರಿಕ್ ಟನ್‌ಗೆ $750 ಇದ್ದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದು ಅವರು ಸಲಹೆ ನೀಡಿದರು.

ಆದರೆ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಜತೆಗೆ ಹಲವು ಸಮಸ್ಯೆಗಳು ಎದುರಾಗಿ ಅನಿಲ ಸಿಲಿಂಡರ್‌ಗಳ ಅಂತಾರಾಷ್ಟ್ರೀಯ ಬೆಲೆಯನ್ನು ವಿವಿಧ ಅಂಶಗಳು ನಿರ್ಧರಿಸುತ್ತವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಆದರೆ ಲೋಕಸಭೆಯಲ್ಲಿ ಡಿಎಂಕೆ ಸಂಸದ ಕಲಾನಿಧಿ ವೀರಸ್ವಾಮಿ ಅವರು ದೇಶೀಯ ಎಲ್‌ಪಿಜಿ ಬೆಲೆ ಕುರಿತು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರು ಈ ಉತ್ತರ ನೀಡಿದ್ದಾರೆ. ಗ್ರಾಹಕರ ಅಗತ್ಯತೆಗಳಿಗೆ, ವಿಶೇಷವಾಗಿ ಅತ್ಯಂತ ದುರ್ಬಲ ವರ್ಗಗಳ ಅಗತ್ಯಗಳಿಗೆ ಸರ್ಕಾರವು ಸೂಕ್ಷ್ಮವಾಗಿರುತ್ತದೆ ಎಂದು ಅವರು ಹೇಳಿದ್ದು ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ 1053 ರೂಪಾಯಿ ಎಂದು ಪುರಿ ಹೇಳಿದ್ದಾರೆ.

ಇದೀಗ ಸೌದಿ ಅರೇಬಿಯಾವು ಅನಿಲ ಬೆಲೆಯಲ್ಲಿ ಶೇಕಡಾ 330 ಕ್ಕಿಂತ ಹೆಚ್ಚು ಹೆಚ್ಚಳವನ್ನು ದಾಖಲಿಸಿದ್ದು ಸರ್ಕಾರವು ಅಡುಗೆ ಅನಿಲ ಬೆಲೆಗಳನ್ನು ಸ್ವಲ್ಪಮಟ್ಟಿಗೆ ಏರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾದಲ್ಲಿ ಗ್ಯಾಸ್ ಬೆಲೆ ಕಡಿಮೆಯಾದರೆ ಅದರ ಪರಿಣಾಮ ದೇಶದಲ್ಲಿ ಲಭ್ಯವಿರುವ ಎಲ್ ಪಿಜಿ ಸಿಲಿಂಡರ್ ಗಳ ಮೇಲೂ ಬೀಳಲಿದೆ ಎಂಬ ಮಾಹಿತಿ ಇದೆ.

ಇದಲ್ಲದೆ ಮಾಹಿತಿಯ ಪ್ರಕಾರ, ಈ ಹಿಂದೆ ಪ್ರತಿ ವ್ಯಕ್ತಿಗೆ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಒಂದು ವೇಳೆ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ಆರಂಭವಾದರೆ ಸರ್ಕಾರವು ಮೊದಲು ಬಡವರಿಗೆ ಗ್ಯಾಸ್ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲು ಪ್ರಾರಂಭಿಸುತ್ತದೆ ಎಂಬ ಮಾಹಿತಿ ಹೊರಬಿದ್ದಿದ್ದು ಇದೀಗ ಗ್ಯಾಸ್ ಬೆಲೆ ಏರಿಕೆ ಬಗ್ಗೆ ನಾನಾ ವಿವಾದಗಳು ಹುಟ್ಟಿಕೊಂಡಿದೆ.