Home News ಬ್ರೇಕಪ್ ಮಾಡಿಕೊಂಡ ಗರ್ಲ್ ಫ್ರೆಂಡ್ ಮುಖದ ಮೇಲೆ ತನ್ನ ಹೆಸರನ್ನು ದೊಡ್ಡದಾಗಿ ಪರ್ಮನೆಂಟ್ ಟ್ಯಾಟೂ ಹಾಕಿದ...

ಬ್ರೇಕಪ್ ಮಾಡಿಕೊಂಡ ಗರ್ಲ್ ಫ್ರೆಂಡ್ ಮುಖದ ಮೇಲೆ ತನ್ನ ಹೆಸರನ್ನು ದೊಡ್ಡದಾಗಿ ಪರ್ಮನೆಂಟ್ ಟ್ಯಾಟೂ ಹಾಕಿದ ಭೂಪ!!

Hindu neighbor gifts plot of land

Hindu neighbour gifts land to Muslim journalist

ಬ್ರೆಸಿಲಿಯಾ(ಬ್ರೆಜಿಲ್): ತನ್ನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯಕರ, ಮಾಜಿ ಪ್ರೇಯಸಿಯನ್ನು ಅಪಹರಿಸಿ ಮುಖದ ಮೇಲೆ ಆತನ ಹೆಸರನ್ನು  ಟ್ಯಾಟೂ ಹಾಕಿ ವಿಕೃತಿ ಮೆರೆದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

ಬ್ರೆಜಿಲ್‌ನ 18 ವರ್ಷದ ಸಾವೊ ಪೌಲೊ ನಿವಾಸಿ ತಯಾನೆ ಕಾಲ್ದಾಸ್ ಹಾಗೂ ಗೆಳೆಯನಾದ 20 ವರ್ಷದ ಗೇಬ್ರಿಯಲ್ ಕೊಯೆಲ್ಲೋ 2019 ರಿಂದ ಪರಿಚಯವಾಗಿದ್ದರು. ಬಳಿಕ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ದೂರವಾಗಿದ್ದರು. ಆದರೆ, ಪಾಗಲ್‌ಪ್ರೇಮಿ ಗೇಬ್ರಿಯಲ್ ತನ್ನ ಮಾಜಿ ಪ್ರೇಯಸಿ ತಯಾನೆಯನ್ನು ಬಿಟ್ಟಿರಲಿಲ್ಲ. ಆಕೆಯನ್ನ ಸದಾ ನೆನಪಿಸಿಕೊಳ್ಳುತ್ತಾ ಇದ್ದ ಆತ, ಆಕೆ ಕೂಡ ತನ್ನ ಜತೆ ಗೆಳೆತನ ಮಾಡಬೇಕು ಎಂದು ಬಯಸಿದ್ದ. ಆದ್ರೆ ಆಕೆ ಆತನ ಸಹವಾಸದಿಂದ ದೂರ ಹೋಗಿದ್ದಳು.

ಆಕೆ ಎಲ್ಲೆ ಇದ್ರೂ ತನ್ನನ್ನು ನೆನಪಿಸಿಕೊಳ್ಳಬೇಕು. ಅಲ್ಲದೆ, ಆಕೆಯನ್ನೂ ಯಾರು ನೋಡಿದರೂ, ಅಲ್ಲಿ ನನ್ನ ಹೆಸರು ಕಾಣಬೇಕು ಎಂದು ಯೋಚಿಸಿದ ಆತ ಕೆಲ ದಿನಗಳ ಹಿಂದೆ ಆಕೆಯನ್ನು ಅಪಹರಿಸಿದ್ದ. ನಂತರ ತನ್ನ ಮನೆಗೆ ಹೊತ್ತೊಯ್ದು ಆಕೆಯ ಮುಖದ ಮೇಲೆ ಕಾಣಿಸುವಂತೆ ದೊಡ್ಡದಾಗಿ ತನ್ನದೇ ಹೆಸರನ್ನು ಪರ್ಮನೆಂಟ್ ಟ್ಯಾಟೂ ಹಾಕಿದ್ದಾನೆ.

ಇದರಿಂದ ನೊಂದ ಯುವತಿ ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕೋರಿದ್ದಾಳೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ಬಗ್ಗೆ ಕನಿಕರ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ. ಇದೀಗ ಯುವತಿಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್ ಚಿಕಿತ್ಸೆಯಿಂದ ಅಳಿಸಿ ಹಾಕಲಾಗಿದೆ.