Home News ಲೈವ್ ಟೆಲಿಕಾಸ್ಟ್ ನಲ್ಲಿ ಯಾರಿಗೋ ಕೇಳಬೇಕಾದ ಪ್ರಶ್ನೆಯನ್ನು ಇನ್ಯಾರಿಗೋ ಕೇಳಿ ಎಡವಟ್ಟು ಮಾಡಿಕೊಂಡ ಖ್ಯಾತ ಪತ್ರಕರ್ತ...

ಲೈವ್ ಟೆಲಿಕಾಸ್ಟ್ ನಲ್ಲಿ ಯಾರಿಗೋ ಕೇಳಬೇಕಾದ ಪ್ರಶ್ನೆಯನ್ನು ಇನ್ಯಾರಿಗೋ ಕೇಳಿ ಎಡವಟ್ಟು ಮಾಡಿಕೊಂಡ ಖ್ಯಾತ ಪತ್ರಕರ್ತ !! | ಅತಿಥಿಗಳ ಮೇಲೆ ರೇಗಾಡಿದ ವೀಡಿಯೋ ಫುಲ್ ವೈರಲ್

Hindu neighbor gifts plot of land

Hindu neighbour gifts land to Muslim journalist

ರಷ್ಯಾ- ಉಕ್ರೇನ್ ಯುದ್ಧದ ಕುರಿತು ಭಾರತದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅದರಲ್ಲೂ ಟಿವಿ ವಾಹಿನಿಗಳಲ್ಲಿ ಚರ್ಚೆ ಭಾರಿ ಜೋರಾಗಿಯೇ ಇದೆ. ಆದರೆ ಇದೀಗ ಟಿವಿ ವಾಹಿನಿಯ ಚರ್ಚೆಯಲ್ಲಿ ಭಾರತೀಯ ಪತ್ರಕರ್ತನೊಬ್ಬ ತನ್ನ ಎಡವಟ್ಟಿನಿಂದಾಗಿ ಟ್ರೋಲಿಗರ ಆಹಾರವಾಗಿದ್ದಾರೆ.

ಹೌದು. ಖ್ಯಾತ ಸುದ್ದಿವಾಹಿನಿಯೊಂದರ ಪ್ರಧಾನ ಸಂಪಾದಕ, ನಿರೂಪಕ ಪ್ಯಾನೆಲ್ ನಲ್ಲಿದ್ದ ಅತಿಥಿಗಳ ಹೆಸರನ್ನು ಗೊಂದಲ ಮಾಡಿಕೊಂಡು ಯಾರಿಗೋ ಕೇಳಬೇಕಾದ ಪ್ರಶ್ನೆಯನ್ನು ಮತ್ಯಾರಿಗೋ ಕೇಳಿ ಅವರ ಮೇಲೆ ಎಗರಾಡಿರುವ ಘಟನೆ ನಡೆದಿದೆ.

ಇಬ್ಬರು ಅತಿಥಿಗಳೊಂದಿಗೆ ಉಕ್ರೇನ್‌ ಬಿಕ್ಕಟ್ಟಿನ ಕುರಿತು ಪ್ಯಾನೆಲ್‌ ಚರ್ಚೆ ನಡೆಸಿರುವ ನಿರೂಪಕ, ಉಕ್ರೇನ್‌ ಅತಿಥಿ ಎಂದು ಭಾವಿಸಿ ರಷ್ಯನ್ ಅತಿಥಿಯನ್ನು ಗದರಿಸಿರುವ ಪ್ರಸಂಗ ನಡೆದಿದೆ. ರಷ್ಯಾದ ಅತಿಥಿಯ ಹೆಸರು ಹಿಡಿದು ವಾಗ್ದಾಳಿ ನಡೆಸಿದ ನಿರೂಪಕ, ‘ನೀವು ಉಕ್ರೇನಿಯನ್ನರೊಂದಿಗೆ ಸೇರಿ ಹೋರಾಡಿ. ಆದರೆ ಭಾರತಕ್ಕೆ ಹೇಳಲು ಬರಬೇಡಿ, ನೀವು ನಿಮ್ಮ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬನ್ನಿ’ ಎಂದು ಸುಮಾರು ಎರಡು ನಿಮಿಷಗಳ ಕಾಲ ರಷ್ಯನ್‌ ಅತಿಥಿಯ ಮೇಲೆ ಕೂಗಾಡಿದ್ದಾರೆ.

ಸುಮಾರು ಎರಡು ನಿಮಿಷಗಳ ಕಾಲ ಮೌನವಾಗಿ ಕುಳಿತ ರಷ್ಯನ್‌ ಅತಿಥಿ ಕೊನೆಗೂ ನಿರೂಪಕರನ್ನು ತರಾಟೆಗೆ ತೆಗದುಕೊಂಡಿದ್ದು, ನಾನು ಇದುವರೆಗೂ ಏನೂ ಮಾತನಾಡೇ ಇಲ್ಲ. ಆದರೆ ನನ್ನ ಹೆಸರು ಕೂಗಿ ಯಾಕೆ ಎಗರಾಡ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆಗಿರುವ ಪ್ರಮಾದ ತಿಳಿದ ನಿರೂಪಕ ರಷ್ಯನ್‌ ಅತಿಥಿಯ ಪ್ರಶ್ನೆಯೊಂದಿಗೆ ತನ್ನ ಪ್ರಮಾದದ ಅರಿವಾಗಿದೆ. ತಕ್ಷಣವೇ ಕ್ಷಮೆ ಕೇಳಿ ತನಗಾದ ಗೊಂದಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಈ ವೀಡಿಯೋದ ತುಣುಕು ಸಾಕಷ್ಟು ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ.

ಇನ್ನು ಈ ಘಟನೆಗೆ ಟಿವಿ ಚಾನೆಲ್ ಡೆಸ್ಕ್ ನಲ್ಲಿದ್ದ ಸಿಬ್ಬಂದಿಯೇ ಕಾರಣ ಎನ್ನಲಾಗಿದ್ದು, ಪರದೆ ಮೇಲೆ ರಷ್ಯನ್ ಅತಿಥಿ ಹಾಗೂ ಉಕ್ರೇನ್ ಅತಿಥಿಯ ಹೆಸರುಗಳು ಅದಲು ಬದಲಾಗಿದ್ದು, ಈ ಗೊಂದಲಕ್ಕೆ ಕಾರಣ ಎನ್ನಲಾಗಿದೆ.