

Liquor Sale: ಹಲವು ವರ್ಷಗಳಿಂದ ಮದ್ಯ ವ್ಯಾಪಾರಿಗಳ ಬೇಡಿಕೆಗಳಿಗೆ ಸರ್ಕಾರದ ಕಡೆಯಿಂದ ಯಾವುದೇ ಸ್ಫಂದನೆ ಸಿಕ್ಕಿಲ್ಲ, ಇದರಿಂದ ಬಹಳಷ್ಟು ತೊಂದರೆಗೆ ಒಳಗಾಗಿರುವ ಹಿನ್ನೆಲೆ ಅಬಕಾರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಚಾರ ಖಂಡಿಸಿ ಹೋರಾಟ ನಡೆಸಲು ಮದ್ಯದಂಗಡಿ ಮಾಲಿಕರು ಮುಂದಾಗಿದ್ದಾರೆ. ಈ ಕುರಿತು ಬಾರ್ ಮಾಲೀಕರ ಅಸೊಶಿಯೇಶನ್ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಹೆಗಡೆ ತಿಳಿಸಿದ್ದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ಬಳಿ ಜುಲೈ 26ರಂದು ಪ್ರತಿಭಟನೆಗೆ ಮದ್ಯದಂಗಡಿ ಮಾಲೀಕರು ಮುಂದಾಗಿದ್ದಾರೆ.
ಸದ್ಯ ಅಬಕಾರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಚಾರ ಖಂಡಿಸಿ ಶುಕ್ರವಾರ ಬೆಳಗ್ಗೆ 10 -30 ರಿಂದ ಸಂಜೆ 4-30 ವರೆಗೆ ಪ್ರತಿಭಟನೆ ನಡೆಯಲಿದೆ. ಆದ್ರೆ ಇದರೊಂದಿಗೆ ರಾಜ್ಯದಲ್ಲಿ ಜುಲೈ 26 ರಂದು ಮದ್ಯ (Liquor Sale) ಸಿಗಲ್ವಾ ಎಂಬ ಪ್ರಶ್ನೆ ಎದುರಾಗಿದೆ.
ಪ್ರತಿಭಟನೆಯಲ್ಲಿ ಮದ್ಯದಂಗಡಿ ಮಾಲೀಕರು, ಬೇಡಿಕೆಗಳ ಪ್ರದರ್ಶನ ಮಾಡಲಿದ್ದಾರೆ. ಜುಲೈ 26 ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಲಿರುವ ಬಾರ್ ಮಾಲೀಕರ ಅಸೋಸಿಯೇಶನ್ ಸದಸ್ಯರು, ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಿದ್ದಾರೆ. ಈ ಕುರಿತು ಮಾತನಾಡಿರುವ ಬಾರ್ ಮಾಲೀಕರ ಅಸೊಶಿಯೇಶನ್ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಹೆಗಡೆ ಅವರು, ರಾಜ್ಯದ 30 ಜಿಲ್ಲೆಗಳ ಮದ್ಯ ಮಾರಾಟಗಾರರು ಒಂದಾಗಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಜಾಥಾವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಬೇಡಿಕೆಗೆ ಯಾವುದೇ ಸ್ಫಂದನೆ ಸಿಕ್ಕಿಲ್ಲ, ಇದರಿಂದ ಬಹಳಷ್ಟು ತೊಂದರೆಗೆ ಒಳಗಾಗಿದ್ದೇವೆ. ನಾವು ಸುಮಾರು 40 ಸಾವಿರ ಕೋಟಿಯಷ್ಟು ಹಣವನ್ನು ಸರ್ಕಾರಕ್ಕೆ ಕೊಡ್ತೇವೆ. ಆದರೂ ನಮ್ಮ ತೊಂದರೆಗಳನ್ನು ಕೇಳುವವರು ಇಲ್ಲ ಎಂದು ಕರುಣಾಕರ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇವತ್ತಿನ ಮದ್ಯ ವ್ಯಾಪಾರ ಕಷ್ಟಕರವಾಗಿದೆ. ಹೇಳಿಕೊಳ್ಳಲು ಆಗಾದ ಕೆಲವು ಕಷ್ಟುಗಳನ್ನು ನಾವು ಅನುಭವಿಸುತ್ತಿದ್ದೇವೆ. ಹಳೆ ಕಾಲದ ಕಾನೂನು ಬದಲಾವಣೆ ಆಗಬೇಕಿದೆ. ಇಲಾಖೆಯಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ನಮ್ಮ ಸಮಸ್ಯೆಗಳು ಏನಿದೆ ಅಂತ ಸಾಲು ಸಾಲು ಫೈಲ್ ಗಳನ್ನು ಮುಖ್ಯಮಂತ್ರಿಗಳಿಗೆ ಹಲವು ಬಾರಿ ನೀಡಿದ್ದೇವೆ. ಉನ್ನತ ಅಧಿಕಾರಿಗಳಿಗೆ ನೀಡಿದ್ದೇವೆ, ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಮ್ಮ ಕಷ್ಟ ಹೇಳಿಕೊಂಡು ಸರ್ಕಾರ ಕಣ್ಣು ತೆರಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಅನಿವಾರ್ಯವಾಗಿ 30 ಜಿಲ್ಲೆಗಳ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.













