Home News LIC : ಎಲ್‌ಐಸಿಯ ಈ ಯೋಜನೆಯಲ್ಲಿ ಒಮ್ಮೆ ಪಾವತಿಸಿ, ಮಾಸಿಕ ಒಂದು ಲಕ್ಷ ಪಡೆಯಿರಿ! ಅದ್ಭುತ...

LIC : ಎಲ್‌ಐಸಿಯ ಈ ಯೋಜನೆಯಲ್ಲಿ ಒಮ್ಮೆ ಪಾವತಿಸಿ, ಮಾಸಿಕ ಒಂದು ಲಕ್ಷ ಪಡೆಯಿರಿ! ಅದ್ಭುತ ಯೋಜನೆಯ ಪ್ರಯೋಜನ ಪಡೆಯಿರಿ!!!

LIC Jeevan shanti yojana

Hindu neighbor gifts plot of land

Hindu neighbour gifts land to Muslim journalist

LIC Jeevan shanti yojana : LIC ಹಲವಾರು ಜನರಿಗೆ ಉಪಯುಕ್ತವಾದ, ಅನುಕೂಲಕರವಾದ ಯೋಜನೆಯಾಗಿದೆ. ಸಾಕಷ್ಟು ಜನರು ಇದರಲ್ಲಿ ಹೂಡಿಕೆಯೂ ಮಾಡುತ್ತಾರೆ. ಸದ್ಯ ಭಾರತೀಯ ಜೀವ ವಿಮಾ ನಿಗಮ(LIC)ದ ಯೋಜನೆಯಾದ “ಎಲ್ಐಸಿ ಜೀವನ್ ಶಾಂತಿ”(LIC Jeevan shanti), ನಾಗರೀಕರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಈ ಯೋಜನೆಯಲ್ಲಿ ಕೇವಲ ಒಮ್ಮೆ ಪಾವತಿಸಿದರೆ, ನಿವೃತ್ತಿಗೂ ಮುನ್ನ 1 ಲಕ್ಷ ರೂ. ಮಾಸಿಕ ಪಿಂಚಣಿ (pension)ಪಡೆಯಬಹುದು. ಅಲ್ಲದೆ, ನಿವೃತ್ತಿ ನಂತರವೂ ಈ ಯೋಜನೆ ಆರ್ಥಿಕ ಬೆಂಬಲ ನೀಡಲಿದೆ.

“ಎಲ್ಐಸಿ ಜೀವನ್ ಶಾಂತಿ ಯೋಜನೆ”(LIC Jeevan shanti yojana) ಅಡಿಯಲ್ಲಿ ಮಾಸಿಕವಾಗಿ ಒಂದು ಲಕ್ಷ ರೂ.ಗಳಿಂತಲೂ ಹೆಚ್ಚು ಪಿಂಚಣಿ ಪಡೆಯಬಹುದು. ಇದು ಮಾತ್ರವಲ್ಲದೆ, ನಿಗಮವು ಇತ್ತೀಚೆಗೆ ತಮ್ಮ ವಾರ್ಷಿಕ ದರಗಳನ್ನು ನವೀಕರಿಸಿದೆ. ಇದರಿಂದಾಗಿ ಪಾಲಿಸಿದಾರರಿಗೆ ತಮ್ಮ ಪ್ರೀಮಿಯಂಗಳಿಗೆ ಹೆಚ್ಚಿನ ಪಿಂಚಣಿ ಲಭ್ಯವಾಗುತ್ತದೆ.

ಈ ಪಾಲಿಸಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ನಿಯಮಿತ ಆದಾಯವನ್ನು ಬಯಸುವ ನಾಗರೀಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಅವಧಿಗೂ ಮುನ್ನ ನಿವೃತ್ತಿಯನ್ನು ಪಡೆದುಕೊಳ್ಳುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು.

ಇನ್ನು, ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಟ ಮಿತಿ ಇರುವುದಿಲ್ಲ. ನಿಮಗೆ ತಿಂಗಳಿಗೆ ಬೇಕಾಗಿರುವ ಆದಾಯವನ್ನು ಆಧರಿಸಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದಾಗಿದೆ. ನಿಮಗೇನಾದರೂ ಮಾಸಿಕವಾಗಿ ಒಂದು ಲಕ್ಷ ರೂ. ಪೆನ್ಷನ್ ಬೇಕೆಂದರೆ, ಆಗ ನೀವು ಒಂದು ಕೋಟಿ ರೂ.ಗಳಂತೆ 12 ವರ್ಷ ಹೂಡಿಕೆ ಮಾಡಬೇಕು. ಹಾಗೆಯೇ 12 ವರ್ಷದ ಬಳಿಕ ನಿಮಗೆ ಮಾಸಿಕವಾಗಿ 1.06 ಲಕ್ಷ ರೂ. ಆದಾಯ ಸಿಗುತ್ತದೆ.

ನೀವು ಹತ್ತು ವರ್ಷ ಮಾತ್ರ ಹೂಡಿಕೆ ಮಾಡಿದರೆ, ನಿಮಗೆ ತಿಂಗಳಿಗೆ 94,840 ರೂ. ಪೆನ್ಷನ್ ಲಭಿಸುತ್ತದೆ. ಹಾಗೆಯೇ 50 ಲಕ್ಷ ರೂ. ಹೂಡಿಕೆ ಮಾಡಿದರೆ, ನಿಮಗೆ 50,000 ರೂ. ಪಿಂಚಣೆ ಸಿಗುತ್ತದೆ. ನೀವು 12 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಿಮಗೆ 53,460 ರೂ. ಮಾಸಿಕವಾಗಿ ಲಭಿಸುತ್ತದೆ.