Home News Kodi Sri: ಕೋಡಿ ಶ್ರೀಗಳ ನಿಗೂಢ ಭವಿಷ್ಯ, ಈಗ ಇಡೀ ರಾಜ್ಯಕ್ಕೆ ಕಾದಿದ್ಯ..?

Kodi Sri: ಕೋಡಿ ಶ್ರೀಗಳ ನಿಗೂಢ ಭವಿಷ್ಯ, ಈಗ ಇಡೀ ರಾಜ್ಯಕ್ಕೆ ಕಾದಿದ್ಯ..?

Kodi Sri Shivananda Shivayogi

Hindu neighbor gifts plot of land

Hindu neighbour gifts land to Muslim journalist

Kodi Sri Shivananda Shivayogi: ಈ ಹಿಂದೆ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಅವರು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ (Kodi Sri shivananda shivayogi) ಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿಯಾಗಿದ್ದು, ಅವರ ಆಶೀರ್ವಾದ ಪಡೆದುಕೊಂಡಿದ್ದರು.

ರಾಜಕೀಯ, ಸಾಮಾಜಿಕ, ಆರ್ಥಿಕತೆ ಹೀಗೆ ಪ್ರಪಂಚದ ಆಗು ಹೋಗುಗಳ ಬಗ್ಗೆ ಕೋಡಿಮಠದ ಶ್ರೀಗಳ ಮಾತುಗಳು ಭವಿಷ್ಯದ ಸೂಚನೆಗಳನ್ನು ನೀಡುವಲ್ಲಿ ಬಲವಾದ ನಂಬಿಕೆ ಈಗಾಗಲೇ ಸತ್ಯವಾಗಿದೆ.

ಇದೀಗ ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ ಈ ಬಾರಿಯ ಮಾತುಗಳು ನಿಗೂಢವಾಗಿಯೇ ಉಳಿದಿವೆ.

ಹೌದು, ಈ ಹಿಂದೆ ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ನಿಜ ಆಗಿದೆ. ಇದೀಗ ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ ಜಲಪ್ರಳಯ ಆಗೋ ಆಗುವ ಲಕ್ಷಣ ಇದೆ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಶ್ರೀಗಳು, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ ಎಂದು ನಿಗೂಢ ಅರ್ಥದಲ್ಲಿ ಮಾತನಾಡಿದರು.

ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದ್ದು, ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರ ಅಕಾಲಿಕ ಮೃತ್ಯು ಆಗುವ ಸೂಚನೆ ಇದೆ ಎಂದರು.

ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತದೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲಾ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಸರ್ಕಾರಗಳಿಗೆ ಸಲಹೆ ನೀಡಿದರು.

ಇನ್ನು ಕರುನಾಡಿಗೂ ಕೆಲವೊಂದು ಆಪತ್ತು ಇದೆ. ಕೆಲ ಸಾವು ನೋವುಗಳು ಆಗುತ್ತವೆ. ದೈವ ಕೃಪೆಯಿಂದ ಪಾರಾಗಬಹುದು. ಭಾರತದಲ್ಲಿ ನಾನು ಹೇಳಿದಂತೆ ಒಂದು ಘಟನೆ ಆಗುತ್ತದೆ. ತಪ್ಪಿಸುವಂತದ್ದು ಆಳುವವರ ಕೈಯಲ್ಲಿದೆ ಎಂಬುದನ್ನು ಸಹ ಹೇಳಿದರು.

ಜಗತ್ತಿನ ಸಾಮ್ರಾಟರು ತಲ್ಲಣ ಆಗಲಿದ್ದಾರೆ. ಬಡವರಿಗೆ ಗ್ಯಾರಂಟಿ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರ್ಲಿಲ್ಲವೊ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದು ಶಕ್ತಿ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನದು ಅಳುವವನ ಕೈಯಲ್ಲಿದೆ ಎಂದಿದ್ದಾರೆ. ಸದ್ಯ ಶ್ರೀಗಳ ಕೆಲವೊಂದು ಒಗಟ್ಟಿ ನ ಮರ್ಮ ವನ್ನು ನಮ್ಮ ಮುಂದೆ ಇಟ್ಟಿದ್ದು ನಮಗೆಲ್ಲರಿಗೂ ಇದೊಂದು ಅಳಿವು ಉಳಿವಿನ ಸವಾಲು ಆಗಿದೆ.

 

ಇದನ್ನು ಓದಿ: Mrunal thakur: ‘ಆ ಮ್ಯಾಟರ್’ ನಲ್ಲಿ ನಾನು ತುಂಬಾ ಓಪನ್, ಯಾವಾಗ್ಲೂ ರೆಡಿ ಎಂದ ಮೃನಾಲ್ !! ಸೀತಾ ಮಹಾಲಕ್ಷ್ಮೀಯ ಹೇಳಿಕೆಗೆ ದಂಗಾದ ಜನ !!