

BMTC conductor viral video: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ ಕಂಡಕ್ಟರ್ ಕರ್ತವ್ಯದ ವೇಳೆ ಧರಿಸಿದ್ದ ನಮಾಜ್ ಟೋಪಿಯನ್ನು (Cap) ಮಹಿಳಾ ಪ್ರಯಾಣಿಕರೊಬ್ಬರು (Woman Passenger) ತೆಗೆಸಿರುವ ವಿಡಿಯೋ (BMTC conductor viral video) ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದ್ದು, ವೀಡಿಯೋ ಮಾಡಿದ ಮಹಿಳೆಯ ವಿರುದ್ಧ ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಹನೀಫ್ ಎಂಬವರು ಮಹಿಳೆ ಮತ್ತು ಕಂಡಕ್ಟರ್ ನಡುವಣ ಸಂವಾದದ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟೋಪಿ ಧರಿಸಿದ ಕಂಡಕ್ಟರ್ ಮತ್ತು ಆ ಮಹಿಳೆ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದ್ರೆ ಈ ವಿಡಿಯೋ ವಾಟ್ಸಪ್ನಲ್ಲಿ ಸಿಕ್ಕಿರುವ ಮಾಹಿತಿಯನ್ನು ನೀಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ನಡೆದ ಸಂಭಾಷಣೆಯ ಪ್ರತಿ ಹೀಗಿದೆ,
ಮಹಿಳೆ: ಸರ್, ನಿಮ್ಮ ಯುನಿಫಾರ್ಮ್ನಲ್ಲಿ ಈ ಟೋಪಿ ಧರಿಸಲು ಅವಕಾಶ ಇದೆಯಾ?
ಕಂಡಕ್ಟರ್: ಹಾಕಬಹುದು ಅಥವಾ ಹಾಕದೇ ಇರಬಹುದು.
ಮಹಿಳೆ: ಹಾಕಬಹುದು ಅಂದ್ರೆ ನಿಮ್ಮ ಧರ್ಮವನ್ನು ಮನೆಯಲ್ಲಿಟ್ಟುಕೊಳ್ಳಿ. ಇದು ಸಮವಸ್ತ್ರದ ಭಾಗವಾಗಿಲ್ಲದಿದ್ದರೆ, ನೀವು ಅದನ್ನು ಧರಿಸಲು ಸಾಧ್ಯವಿಲ್ಲ. ಟೋಪಿಯನ್ನು ಹಾಕಲು ಅನುಮತಿ ಇದೆಯಾ? ಅಥವಾ ಇಲ್ಲವಾ?
ಕಂಡಕ್ಟರ್: ಸುಮಾರು ವರ್ಷಗಳಿಂದ ನಾನು ಹಾಕಿಕೊಂಡು ಬಂದಿದ್ದೇನೆ.
ಮಹಿಳೆ: ಸುಮಾರು ವರ್ಷದಿಂದ ಹಾಕೋದು ಬೇರೆ. ನಿಮ್ಮ ಧರ್ಮವನ್ನು ಮನೆಗಳಲ್ಲಿ ಮಾಡಿಕೊಂಡ್ರೆ ಯಾರದೂ ಅಭ್ಯಂತರವಿಲ್ಲ. ಯುನಿಫಾರ್ಮ್ನಲ್ಲಿ ಇದು ಇದೆಯಾ? ನೀವು ಸರ್ಕಾರಿ ನೌಕರರು, ಸಮವಸ್ತ್ರದ ಜೊತೆಗೆ ಟೋಪಿಯನ್ನು ಧರಿಸಲು ಅವಕಾಶ ಇದೆಯಾ?
ಕಂಡಕ್ಟರ್: ಸುಮಾರು ವರ್ಷಗಳಿಂದ ಟೋಪಿ ಹಾಕ್ತಿದ್ದೇನೆ. ಆದ್ರೆ ಯಾರೂ ಈ ಬಗ್ಗೆ ಯಾರು ಕೂಡ ವಿರೋಧ ವ್ಯಕ್ತಪಡಿಸಿಲ್ಲ.
ಮಹಿಳೆ: ಕಾನೂನು ಪಾಲನೆ ಮಾಡೋದು ಸರ್ಕಾರಿ ನೌಕರರ ಕೆಲಸ. ನಿಮ್ಮ ಕಾನೂನಿನಲ್ಲಿ ಅನುಮತಿ ಇದೆಯಾ?
ಕಂಡಕ್ಟರ್: ನಾನು ಈ ವಿಷಯವನ್ನು ವ್ಯವಸ್ಥಾಪಕ ನಿರ್ದೇಶಕರ ಬಳಿ ಪ್ರಸ್ತಾಪಿಸುತ್ತೇನೆ. ಕೊಂಡೊಯ್ಯುತ್ತೇನೆ.
ಮಹಿಳೆ: ನಾನು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಬೇಕೇ? ಅದಕ್ಕಾಗಿಯೇ ನಾನು ಈ ವೀಡಿಯೊ ಮಾಡುತ್ತಿದ್ದೇನೆ. ನಿಮ್ಮ ನಿಯಮಗಳ ಅಡಿಯಲ್ಲಿ ಇದಕ್ಕೆ ಅವಕಾಶವಿದೆಯೇ? ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ತೆಗೆದುಹಾಕಿ. ಅದನ್ನು ನಿಮ್ಮ ಮನೆಯಲ್ಲಿ ಅಥವಾ ಮಸೀದಿಯಲ್ಲಿ ಧರಿಸಿ, ನಾವು ವಿರೋಧಿಸುವುದಿಲ್ಲ.
ಕಂಡಕ್ಟರ್ : ಆಯ್ತು ಬಿಡಿ ನೋಡೋಣ. ನೋ ಪ್ರಾಬ್ಲಂ ಎಂದು ಹೇಳಿ ಆಕೆಯ ಒತ್ತಾಯದ ಮೇರೆಗೆ ಟೋಪಿ ತೆಗೆದು ಜೇಬಿನಲ್ಲಿರಿಸಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋ ಇಲ್ಲಿದೆ
ಈ ವಿಚಾರವಾಗಿ ಬಿಎಂಟಿಸಿ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಇದನ್ನು ಓದಿ: Aeronics MD- CEO Murder: ಏರೋನಿಕ್ಸ್ ಎಂಡಿ – ಸಿಇಒ ಹತ್ಯೆ ಹಿನ್ನೆಲೆಯಲ್ಲಿ ಜಿ-ನೆಟ್ ಎಂಡಿ ಅರೆಸ್ಟ್ !













