Home News Bank slip viral photo: ಜಾಲತಾಣದಲ್ಲಿ ವೈರಲ್ ಆಯ್ತೊಂದು ಬ್ಯಾಂಕ್ ಸ್ಲಿಪ್ !! ಇದ್ರಲ್ಲಿ ಬರೆದದ್ದೇನೆಂದು...

Bank slip viral photo: ಜಾಲತಾಣದಲ್ಲಿ ವೈರಲ್ ಆಯ್ತೊಂದು ಬ್ಯಾಂಕ್ ಸ್ಲಿಪ್ !! ಇದ್ರಲ್ಲಿ ಬರೆದದ್ದೇನೆಂದು ನಿವಾದ್ರೂ ಹೇಳ್ತೀರಾ?

Hindu neighbor gifts plot of land

Hindu neighbour gifts land to Muslim journalist

Bank slip viral photo: ಸಾಮಾಜಿಕ ಜಾಲತಾಣದಲ್ಲಿ (social media) ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇದೆ. ಪ್ರಾಣಿ ,ಪಕ್ಷಿಗಳ, ತಮಾಷೆಯ ,ಗಂಭೀರದ, ಹೀಗೆ ಬಗೆ ಬಗೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ವ್ಯಕ್ತಿಯೊಬ್ಬ ಬ್ಯಾಂಕ್ ಸ್ಲಿಪ್ (Bank slip) ಬರೆದಿರುವ ಫೋಟೋ ವೈರಲ್ ಆಗಿದೆ.

ಎಷ್ಟೇ ವಿದ್ಯೆ ಇದ್ದರೂ, ಬುದ್ಧಿವಂತರಾಗಿದ್ದರು ಕೆಲವರಿಗೆ ಬ್ಯಾಂಕ್ ಸೇರಿದಂತೆ ಹಣಕಾಸಿನ ವ್ಯವಹಾರದ (Money business) ಬಗ್ಗೆ ಸರಿಯಾಗಿ ಜ್ಞಾನವಿರೋದಿಲ್ಲ. ಈಗ ಎಷ್ಟೇ ಡಿಜಿಟಲ್ ಪೇಮೆಂಟ್ಗಳು (Digital payment) ಇದ್ದರೂ ಕೆಲವೊಂದು ಬಾರಿ ಬ್ಯಾಂಕಿಗೆ ಹೋಗಲೇ ಬೇಕಾಗಿರುತ್ತದೆ. ಅಲ್ಲಿ ಸ್ಲಿಪ್ ಅಥವಾ ಚೆಕ್ ತುಂಬುವಾಗ ಕೆಲವರಿಗೆ ಗೊಂದಲ ಉಂಟಾಗುತ್ತದೆ. ಇದೀಗ ಒಬ್ಬ ವ್ಯಕ್ತಿಯು ಬರೆದಿರುವ ಸ್ಲಿಪ್ ನ ಫೋಟೋ( Bank slip viral photo) ಭಾರಿ ವೈರಲ್ ಆಗಿದ್ದು, ಇದನ್ನು ನೀವು ನೋಡಿದರೆ ಖಂಡಿತವಾಗಿಯೂ ಹೊಟ್ಟೆ ಹುಣ್ಣುಗುವಷ್ಟು ನಗುತ್ತೀರಿ. ಅಂತದ್ದೇನೂ ಬರೆದಿದ್ದಾರೆ ಗೊತ್ತಾ? ..

ಈಗ ಎಲ್ಲ ಬ್ಯಾಂಕ್ ಗಳೂ(bank) ಆಯಾ ರಾಜ್ಯದ ಭಾಷೆಯಲ್ಲೇ (language) ಸ್ಲಿಪ್ ನೀಡುತ್ತವೆ. ಆದ್ರೂ ಜನರಿಗೆ ಸ್ವಲ್ಪ ಗೊಂದಲ ಉಂಟಾಗುತ್ತದೆ. ವೈರಲಾಗುತ್ತಿರುವ ಪೋಸ್ಟ್ ನಲ್ಲಿ ಬ್ಯಾಂಕ್ ಠೇವಣಿ (Deposit) ಸ್ಲಿಪ್ ಫೋಟೋವನ್ನು ನೀವು ಕಾಣಬಹುದು. ಅದು ಹಿಂದಿಯಲ್ಲಿದೆ. ಖಾತೆದಾರನು ಠೇವಣಿ ಮಾಡಲು ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸ್ಲಿಪ್ ನಲ್ಲಿ ಭರ್ತಿ ಮಾಡಿದ್ದಾರೆ. ಆದರೆ ಮೊತ್ತದ (Amount) ಜಾಗದಲ್ಲಿ ಮಾತ್ರ ತನ್ನ ರಾಶಿಯನ್ನು ಬರೆದಿದ್ದಾನೆ. ಸ್ಲಿಪ್ ನಲ್ಲಿ “ರಾಶಿ” (ಮೊತ್ತ ಅಥವಾ ಅಮೌಂಟ್ ಗೆ ಹಿಂದಿಯಲ್ಲಿ “ರಾಶಿ” ಎನ್ನಲಾಗುತ್ತದೆ) ಎಂಬ ಪದದ ಮುಂದೆ ತುಲಾ ರಾಶಿ ಎಂದು ಬರೆದಿರುವ ಈ ಫೋಟೋ ವೈರಲ್ ಆಗಿದೆ.

 

https://twitter.com/NationFirst78/status/1515343630009274369/photo/1?ref_src=twsrc%5Etfw%7Ctwcamp%5Etweetembed%7Ctwterm%5E1515343630009274369%7Ctwgr%5Ee0ee5e388a9a8940df5bd4ea14e6c329da99da75%7Ctwcon%5Es1_&ref_url=https%3A%2F%2Fd-28417928671435543716.ampproject.net%2F2306202201000%2Fframe.html

 

ಮೊರಾದಾಬಾದ್‌ನ (Moradabad) ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್ ನಲ್ಲಿ @NationFirst78 ಎಂಬ ಬಳಕೆದಾರ ಫೋಟೋವನ್ನು ಹಂಚಿಕೊಂಡಿದ್ದಾನೆ. ಇದು ಹಳೆಯ ಫೋಟೋ ಆದ್ರೂ ಕೂಡಾ ಈಗ್ಲೂ ವೈರಲ್ ಆಗ್ತಾಯಿದ್ದು, ಜನರನ್ನು ತಮಾಷೆಯ ಕಡಲಲ್ಲಿ ತೇಲಿಸ್ತಾಯಿದೆ. ವೈರಲ್ ಆದ ಚಿತ್ರವನ್ನು ನೋಡಿದ ಜನರು ಖುಷಿಪಟ್ಟು ತಮಾಷೆಯ ಕಾಮೆಂಟ್‌ಗಳನ್ನು ಸುರಿಸಿದ್ದಾರೆ.

 

ಇದನ್ನು ಓದಿ: Weather Report: ರಾಜ್ಯದಲ್ಲಿನ್ನೂ ಒಂದು ವಾರ ಎಡೆ ಬಿಡದೆ ಕಾಡಲಿದೆ ಮಳೆ ಅಬ್ಬರ !! ಬೆಂಗಳೂರು ಸೇರಿ ಕರಾವಳಿಗೆ ಕಟ್ಟೆಚ್ಚರ !!