Home News Blue Film: ಅತೀ ದೊಡ್ಡ ‘ಬ್ಲೂ ಫಿಲಂ’ ಚಿತ್ರೀಕರಣ ಜಾಲ ಬಯಲು – 400...

Blue Film: ಅತೀ ದೊಡ್ಡ ‘ಬ್ಲೂ ಫಿಲಂ’ ಚಿತ್ರೀಕರಣ ಜಾಲ ಬಯಲು – 400 ಕ್ಕೂ ಹೆಚ್ಚು ಹುಡುಗಿಯರ ವಿಡಿಯೋ ಪತ್ತೆ

Hindu neighbor gifts plot of land

Hindu neighbour gifts land to Muslim journalist

Blue Film: ಅತಿ ದೊಡ್ಡ ಬ್ಲೂ ಫಿಲಂ ಜಾಲವೊಂದು ನೋಯ್ಡ ದೇಶದಲ್ಲಿ ಬಯಲಾಗಿದ್ದು ಸುಮಾರು 400ಕ್ಕೂ ಹೆಚ್ಚು ಹುಡುಗಿಯರ ವಿಡಿಯೋಗಳು ಸಿಕ್ಕಿದೆ ಎಂದು ವರದಿಯಾಗಿದೆ. ಇದೀಗ ಈ ಜಾಲದ ಸೂತ್ರಧಾರರಾಗಿರುವ ಇಬ್ಬರು ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನೋಯ್ಡಾದ ಸೆಕ್ಟರ್ 105 ರಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಬೃಹತ್ ಪೋರ್ನ್ ರಾಕೆಟ್ ನಡೆಸುತ್ತಿದ್ದ ಉಜ್ವಲ್ ಕಿಶೋರ್ ಮತ್ತು ನೀಲು ಶ್ರೀವಾಸ್ತವ್ ಎಂಬ ದಂಪತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಇವರು ಹುಡುಗಿಯರಿಗೆ ಮಾಡೆಲಿಂಗ್ ಅವಕಾಶಗಳ ಆಮಿಷವೊಡ್ಡಿ ನೂರಾರು ಮಹಿಳೆಯರನ್ನು ವಂಚಿಸಿ, ಅವರ ಪೋರ್ನ್ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೂಲಕ ದೆಹಲಿ-ಎನ್‌ಸಿಆರ್‌ನಿಂದ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಚಿತ್ರೀಕರಿಸಿದ ವಿಡಿಯೋಗಳನ್ನು “ಹಾಫ್ ಫೇಸ್ ಶೋ”, “ಫುಲ್ ಫೇಸ್ ಶೋ” ಮತ್ತು “ನ್ಯೂಡ್” ಎಂದು ವರ್ಗೀಕರಿಸಲಾಗಿತ್ತು. ಉಜ್ವಲ್ ಕಿಶೋರ್ ರಷ್ಯಾ ಮೂಲದ ಸೆಕ್ಸ್ ಸಿಂಡಿಕೇಟ್‌ನಲ್ಲಿ ಭಾಗಿಯಾಗಿದ್ದನು ಮತ್ತು ಅಲ್ಲಿಂದಲೇ ಈ ಜಾಲವನ್ನು ವಿಸ್ತರಿಸಲು ಸಹಾಯ ಮಾಡಿದ್ದನು ಎಂದು ವರದಿಯಾಗಿದೆ.

ಇನ್ನು ಈ ವಿಡಿಯೋಗಳನ್ನು ಸೈಪ್ರಸ್ ಮೂಲದ ಟೆಕ್ನಿಯಸ್ ಲಿಮಿಟೆಡ್ ಎಂಬ ಕಂಪನಿಗೆ ಮಾರಾಟ ಮಾಡಲಾಗುತ್ತಿತ್ತು. ಸ್ಟ್ರಿಪ್‌ಚಾಟ್ ಮತ್ತು ಎಕ್ಸ್‌ಹ್ಯಾಮ್‌ಸ್ಟರ್‌ನಂತಹ ಪೋರ್ನ್ ವೆಬ್‌ಸೈಟ್‌ಗಳನ್ನು ಈ ಕಂಪನಿ ನಡೆಸುತ್ತಿದೆ. ಕಳೆದ ಐದು ವರ್ಷಗಳಿಂದ ಈ ರಾಕೆಟ್ ಕಾರ್ಯನಿರ್ವಹಿಸುತ್ತಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅಲ್ಲದೆ . ಈ ದಂಪತಿಗಳು ಗಳಿಕೆಯ ಸುಮಾರು 75% ಅನ್ನು ಉಳಿಸಿಕೊಂಡು, ಮಾಡೆಲ್‌ ಗಳಿಗೆ ಕೇವಲ ಒಂದು ಭಾಗವನ್ನು ಮಾತ್ರ ನೀಡುತ್ತಿದ್ದರು. ದಾಳಿಯ ಸಮಯದಲ್ಲಿ 8 ಲಕ್ಷ ರೂಪಾಯಿ ನಗದು ಮತ್ತು ದಂಪತಿಗಳ ವಿರುದ್ಧ ಅಪರಾಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.