Home News Sabarimala Temple:ಫೆ.13 ರಿಂದ ಶಬರಿಮಲೆಯಲ್ಲಿ ಕುಂಭಮಾಸ ಪೂಜೆ

Sabarimala Temple:ಫೆ.13 ರಿಂದ ಶಬರಿಮಲೆಯಲ್ಲಿ ಕುಂಭಮಾಸ ಪೂಜೆ

Hindu neighbor gifts plot of land

Hindu neighbour gifts land to Muslim journalist

Sabarimala Temple: ಕುಂಭಮಾಸದ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ಫೆ.12 ರಂದು ಸಂಜೆ 5 ಗಂಟೆಗೆ ತೆರೆಯಲಿದೆ. ಪ್ರಧಾನ ಅರ್ಚಕರು 18 ಮೆಟ್ಟಿಲಿಳಿದು ಅಗ್ನಿಕುಂಡಕ್ಕೆ ಅಗ್ನಿಸ್ಪರ್ಶ ಮಾಡಿದ ನಂತರ ಭಕ್ತರಿಗೆ 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪನ ದರ್ಶನವನ್ನು ಪಡೆಯಬಹುದು. ಅಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಫೆ.13 ರಂದು ಕುಂಭ ಮಾಸದ ಪೂಜೆ ಆರಂಭವಾಗಲಿದೆ. ತುಪ್ಪ ಸಹಿತ ಅಭಿಷೇಕ ಸೇವೆ ನಡೆಯಲಿದೆ. ಪೂರ್ವ ಮಂಟಪದಲ್ಲಿ ತಂತ್ರಿಯವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಲಿದೆ. ಫೆ.17 ರಂದು ರಾತ್ರಿ 10ಕ್ಕೆ ಹರಿವರಾಸನಂ ಗಾಯನದೊಂದಿಗೆ ದೇಗುಲ ಮುಚ್ಚಲಾಗುವುದು. ಕುಂಭಮಾಸ ಪೂಜೆಗೆ ಆನ್‌ಲೈನ್‌ ʼಕ್ಯೂ ಬುಕ್ಕಿಂಗ್‌ʼ ಆರಂಭಗೊಂಡಿದೆ. ಶಬರಿಮಲೆ ವೆಬ್‌ಸೈಟ್‌ ಮೂಲಕ ಬುಕ್‌ ಮಾಡಬಹುದು. ಸ್ಪಾಟ್‌ ಬುಕ್ಕಿಂಗ್‌ ಮೂಲಕವೂ ದರ್ಶನಕ್ಕೆ ಅವಕಾಶವಿದೆ.