Home News KSRTC: ಪುರುಷರು, ಮಹಿಳೆಯರೆನ್ನದೆ ಎಲ್ಲಾ ಪ್ರಯಾಣಿಕರಿಗೂ ಶಾಕ್ ಕೊಟ್ಟ KSRTC !!

KSRTC: ಪುರುಷರು, ಮಹಿಳೆಯರೆನ್ನದೆ ಎಲ್ಲಾ ಪ್ರಯಾಣಿಕರಿಗೂ ಶಾಕ್ ಕೊಟ್ಟ KSRTC !!

Hindu neighbor gifts plot of land

Hindu neighbour gifts land to Muslim journalist

KSRTC: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಂತೆ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೂಡ ರಾಜ್ಯದ ಪ್ರಯಾಣಿಕರಿಗೆ ಬಿಗ್‌ ಶಾಕ್‌ ನೀಡಿದೆ.

Physical relationship : ಪುರುಷರೆ, ಲೈಂಗಿಕ ಸಾಮರ್ಥ್ಯ ಹೆಚ್ಚಾಗಬೇಕೆ ?! ಇದೊಂದು ಹಣ್ಣು ತಿನ್ನಿ ಸಾಕು !!

ಹೌದು, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದಂತೆ KSRTC ಕೂಡ ಟಿಕೆಟ್ ಬೆಲೆ ಏರಿಸಲು(Ticket Price Hike)ನಿರ್ಧರಿಸಿದೆ. ತನ್ನ ಹೆಚ್ಚಿನ ಬಸ್ಸುಗಳು ಡೀಸೆಲ್(Diesel) ನಲ್ಲಿ ಚಲಿಸುವುದರಿಂದ, ಒಂದು ಲೀಟರ್ ಡೀಸೆಲ್ ಬೆಲೆಯನ್ನು 3 ರೂ.ಗಳಷ್ಟು ಹೆಚ್ಚಿಸಿರುವ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ನಿರ್ಧಾರವು ಸಾರಿಗೆ ಸಂಸ್ಥೆಗೂ ಮುಳವಾಗಿದೆ.

KSRTC ಪ್ರತಿದಿನ 6.2 ಲಕ್ಷ ಲೀಟರ್ ಡೀಸೆಲ್ ಅನ್ನು ಉಪಯೋಗಿಸುತ್ತದೆ. ಮತ್ತು ಇಂಧನ ಬೆಲೆ ಏರಿಕೆಯ ನಂತರ, ನಿಗಮವು ಇಂಧನಕ್ಕಾಗಿ ದಿನಕ್ಕೆ ಹೆಚ್ಚುವರಿಯಾಗಿ 18.2 ಲಕ್ಷ ರೂ.ಗಳನ್ನು ಖರ್ಚು ಮಾಡಬೇಕಾಗಿದೆ. 2023ರಲ್ಲಿ ಕೆಎಸ್‌ಆರ್ಟಿಸಿ 1,828 ಕೋಟಿ ರೂ.ಗಳ ಡೀಸೆಲ್ ಖರೀದಿಸಿತ್ತು. ಇದು ತಿಂಗಳಿಗೆ 5.4 ಕೋಟಿ ರೂ ಮತ್ತು ವರ್ಷಕ್ಕೆ 65 ಕೋಟಿ ರೂ.ಗಳವರೆಗೆ ಬರುತ್ತದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಹೆಚ್ಚುತ್ತಿರುವ ಸಿಬ್ಬಂದಿ ವೇತನ, ಇಂಧನ ವೆಚ್ಚಗಳು, ನಿರ್ವಹಣಾ ಶುಲ್ಕಗಳು ಮತ್ತು ಇತರ ಅಂಶಗಳಿಂದ ವ್ಯಯ ಕೂಡ ಹೆಚ್ಚಾಗುತ್ತಿದೆ. ಜೊತೆಗೆ ಗ್ಯಾರಂಟಿ ಯೋಜನೆಗಳ ಹೊಡೆತದಿಂದ ಸರ್ಕಾರವು ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇದೆಲ್ಲವನ್ನು ಸರಿದೂಗಿಸಲು ಟಿಕೆಟ್ ದರ ಹೆಚ್ಚಳ ಅನಿವಾರ್ಯ.

ಏಷ್ಟು ಹೆಚ್ಚಾಗಬಹುದು ಟಿಕೆಟ್ ದರ?
ಸಾರ್ವಜನಿಕ ಸಾರಿಗೆ ಮಾಧ್ಯಮವು ಶೇಕಡಾ 20 ರಿಂದ 25 ರಷ್ಟು ಟಿಕೆಟ್‌ ದರ ಹೆಚ್ಚಳಕ್ಕೆ ಒತ್ತಾಯಿಸುತ್ತಿದೆ. ಆದರೆ ರಾಜ್ಯ ಸರ್ಕಾರವು ಸುಮಾರು ಶೇ 10-15 ಹೆಚ್ಚಳವನ್ನು ಅನುಮೋದಿಸಬಹುದು ಎಂದು ಮೂಲಗಳ ತಿಳಿಸಿವೆ.

ಪುರುಷರು-ಮಹಿಳೆಯರಿಗೆ ಹೊರೆ:
ಸಾಮಾನ್ಯವಾಗಿ ಪುರುಷರು ದುಡ್ಡು ಕೊಟ್ಟೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಉಚಿತವಾಗಿ ಓಡಾಡುವ ಕಾರಣ ಮನೆಯ ಪುರುಷರೂ ಅವರೊಂದಿಗೆ ಹೋಗುವುದು ಅನಿವಾರ್ಯ. ಹೀಗಾಗಿ ಟಿಕೆಟ್ ದರ ಏರಿಕೆ ಅವರ ಜೇಬಿಗೆ ಕತ್ತರಿ ಹಾಕುವುದು ಪಕ್ಕಾ. ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣ ಅಲ್ಲವೇ? ಅವರಿಗೇನು ಸಮಸ್ಯೆ ಇಲ್ಲ ಬಿಡಿ ಎಂದು ನೀವು ಹೇಳಬಹುದು. ಆದರೆ ಎಲ್ಲಾ ಬಸ್ಸಿನಲ್ಲಿ ಅವರಿಗೆ ಫ್ರಿ ಇಲ್ಲ. ಐರಾವತ, ರಾಜಹಂಸದಂತ ಬಸ್ಸಿನಲ್ಲಿ ಅವರು ಹಣ ನೀಡಿ ಟಿಕೆಟ್ ಪಡೆಯಬೇಕು. ಜೊತೆಗೆ ಅಂತರಾಜ್ಯ ಬಸ್ಸಿನಲ್ಲಿ ಉಚಿತವಿಲ್ಲ. ಹೀಗಾಗಿ ಅವರಿಗೂ ಟಿಕೆಟ್ ದರ ಏರಿಕೆ ಬಿಸಿ ತಟ್ಟಿಲಿದೆ.

Centipede: ಶತಪದಿ ಹುಳು ಮನೆಯ ಈ ದಿಕ್ಕಿನಲ್ಲಿ ಕಾಣಿಸಿದರೆ ಶುಭವೋ, ಅಶುಭವೋ ಎಂದು ಇಲ್ಲಿ ತಿಳಿಯಿರಿ!