Home News Arjun janya song: ಕಾಂತಾರ ಹಾಡನ್ನೇ ಮೀರಿಸಿದ ಕೃಷ್ಣಂ ಪ್ರಣಯ ಸಖಿ ಹಾಡು ಹೊಸ ರೆಕಾರ್ಡ್!

Arjun janya song: ಕಾಂತಾರ ಹಾಡನ್ನೇ ಮೀರಿಸಿದ ಕೃಷ್ಣಂ ಪ್ರಣಯ ಸಖಿ ಹಾಡು ಹೊಸ ರೆಕಾರ್ಡ್!

Hindu neighbor gifts plot of land

Hindu neighbour gifts land to Muslim journalist

Arjun Janya song: ಮೊದಲೆಲ್ಲಾ ಎಲ್ಲಿ ಹೋದರು ಕಾಂತರ ಸಿನಿಮಾದ ಸಿಂಗಾರ ಸಿರಿಯೇ ಹಾಡಿನ ಹವಾ ಜೋರಾಗಿಯೇ ಇತ್ತು. ಆದ್ರೆ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಹಾಡುಗಳು ಈಗ ಭರ್ಜರಿ ಹಿಟ್ ಆಗಿದ್ದು, ಈ ಸಾಂಗ್ ಹವಾ ಬಹಳ ಜೋರಾಗಿಯೇ ಇದೆ.

ಹೌದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಡುಗಳು (Arjun Janya song)  ಮತ್ತೆ ಜನರ ಮನಸು ಕದ್ದಿದೆ. ಕೃಷ್ಣಂ ಪ್ರಯಣ ಸಖಿ ಸಿನಿಮಾದ ಜೇನ ದನಿಯೋಳೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ನಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ರೀಲ್ಸ್ ನೋಡಿದರೂ ಇದೇ ಹಾಡು. ವಾಟ್ಸಪ್ ಸ್ಟೇಟಸ್ ನಲ್ಲೂ ಇದೇ ಹಾಡು. ಒಟ್ಟಿನಲ್ಲಿ ಎಲ್ಲರನ್ನು ಮೋಡಿ ಮಾಡಿದೆ ಈ ಹಾಡು.

ಅಷ್ಟು ಮಾತ್ರವಲ್ಲ ಜೇನ ದನಿಯೋಳೆ ಹಾಡು ಇನ್ನೊಂದು ರೆಕಾರ್ಡ್ ಮಾಡಿದೆ. ಸೋಷಿಯಲ್ ಮೀಡಿಯಾ ರೀಲ್ಸ್ ನಲ್ಲಿ ಈ ಹಾಡು ಅತೀ ಹೆಚ್ಚು ಬಾರಿ ರೀಲ್ಸ್ ನಲ್ಲಿ ಬಳಕೆಯಾದ ದಾಖಲೆ ಮಾಡಿದೆ. ಇದಕ್ಕೂ ಮೊದಲು ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಈ ದಾಖಲೆ ಮಾಡಿತ್ತು. ಈಗ ದ್ವಾಪರ ಹಾಡು ಆ ದಾಖಲೆಯನ್ನೂ ಮೀರಿ ಅಧಿಕ ಬಾರಿ ಡೌನ್ ಲೋಡ್ ಆದ ದಾಖಲೆ ಮಾಡಿದೆ.

ಹೌದು, ಸಿಂಗಾರ ಸಿರಿಯೇ ಹಾಡು ಒಟ್ಟು 587 ಸಾವಿರ ಬಾರಿ ರೀಲ್ಸ್ ನಲ್ಲಿ ಬಳಕೆಯಾಗಿ ದಾಖಲೆ ಮಾಡಿತ್ತು. ಇದೀಗ ದ್ವಾಪರ ಹಾಡು 591 ಸಾವಿರ ಬಾರಿ ರೀಲ್ಸ್ ನಲ್ಲಿ ಬಳಕೆಯಾಗಿ ಹೊಸ ದಾಖಲೆ ಮಾಡಿದೆ.