Home News Kerala: ಕೇರಳದ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕುಸಿತ: ಮಹಿಳೆ ಸಾವು : ಹಲವರು...

Kerala: ಕೇರಳದ ಕೊಟ್ಟಾಯಂ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕುಸಿತ: ಮಹಿಳೆ ಸಾವು : ಹಲವರು ಗಂಭೀರ

Hindu neighbor gifts plot of land

Hindu neighbour gifts land to Muslim journalist

Kerala: ಕೇರಳದ (Kerala) ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಬಾಲಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ತಳಯೋಲಾಪರಂಬುವಿನ ಬಿಂಧು (52) ಎಂದು ಗುರುತಿಸಲಾಗಿದೆ. ಅಲೀನಾ (11), ಅಮಲ್ ಪ್ರದೀಪ್ (20) ಜಿನು ಸಾಜಿ (38) ಗಾಯಾಳುಗಳು.

ಸದ್ಯ ಗಾಯಾಳುಗಳು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬಾಲಕಿ ಅಲಿನಾ ಹಾಗೂ ಜಿನು ಸಾಜಿ ಅವರ ಪರಿಸ್ಥಿತಿ ಗಂಭೀರವಾಗಿದೆ. ಬಿಂಧು ಅವರು ಮೊಮ್ಮಗಳು ಅಲೀನಾ ಅಪಘಾತವೊಂದರಲ್ಲಿ ಗಾಯಗೊಂಡಿದ್ದಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದೇ ವೇಳೆ ಅಮಲ್ ಪ್ರದೀಪ್, ಜಿನು ಸಾಜಿ ಎಂಬುವರು ಅದೇ ಕಟ್ಟಡದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡ (ವಾರ್ಡುಗಳಿಗೆ ಹೊಂದಿಕೊಂಡಿದ್ದ ಟಾಯ್ಲೆಟ್ ಕಾಂಪ್ಲೆಕ್ಸ್) ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ, ಕುಸಿದ ಕಟ್ಟಡ ಹಲವು ದಶಕಗಳಷ್ಟು ಹಳೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಡ ಕುಸಿದರೂ 2 ಗಂಟೆಗೂ ಹೆಚ್ಚು ನಿಧಾನವಾಗಿ ಪರಿಹಾರ ಕಾರ್ಯಾಚರಣೆ ಆರಂಭವಾಗಿದ್ದಕ್ಕೆ ಬಿಂಧು ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ: Mangaluru: ಮಕ್ಕಳು ಡ್ರಗ್ ಅಡಿಕ್ಟ್ ಆಗಿದ್ದಾರೆಂದು ಪೋಷಕರಿಂದಲೇ ಪೊಲೀಸರಿಗೆ ದೂರು !! ಮುಂದೆ ನಡೆದದ್ದೇಲ್ಲವೂ ವಿಚಿತ್ರ