Home News Kodi Shri: ನುಡಿದದ್ದೆಲ್ಲಾ ನಿಜವಾಗುತ್ತಿದ್ದಂತೆ ರಾಜ್ಯ ರಾಜಕೀಯದ ಕುರಿತು ಅಚ್ಚರಿ ಭವಿಷ್ಯ ಹೇಳಿದ ಕೋಡಿ ಶ್ರೀ...

Kodi Shri: ನುಡಿದದ್ದೆಲ್ಲಾ ನಿಜವಾಗುತ್ತಿದ್ದಂತೆ ರಾಜ್ಯ ರಾಜಕೀಯದ ಕುರಿತು ಅಚ್ಚರಿ ಭವಿಷ್ಯ ಹೇಳಿದ ಕೋಡಿ ಶ್ರೀ !!

Kodi Shri

Hindu neighbor gifts plot of land

Hindu neighbour gifts land to Muslim journalist

Kodi Shri: ಕೋಡಿಮಠ ಸ್ವಾಮಿಜಿಗಳ ಭವಿಷ್ಯಕ್ಕೆ ತುಂಬಾ ಮಹತ್ವವಿದೆ. ಅವರ ಎಲ್ಲಾ ಭವಿಷ್ಯಗಳು ನಿಜವಾಗಿವೆ. ರಾಜಕೀಯವಾಗಿ, ಜಾಗತಿಕವಾಗಿ, ರಾಷ್ಟ್ರದ ವಿಚಾರವಾಗಿ ಹಾಗೂ ಮಳೆ, ಬೆಳೆ, ಪ್ರವಾಹಗಳ ಕುರಿತಾಗಿಯೂ ಅವರು ಭವಿಷ್ಯ ನುಡಿದಿದ್ದು ಅವೆಲ್ಲವೂ ಸಂಭವಿಸಿವೆ, ಸಂಭವಿಸುತ್ತಿವೆ. ಅಂತೆಯೇ ಇದೀಗ ಶ್ರೀಗಳು(Kodi Mutt Shri) ರಾಜ್ಯ ರಾಜಕೀಯದ ಕುರಿತು ಕೆಲವು ಮಾರ್ಮಿಕವಾದ ನುಡಿಗಳನ್ನಾಡಿದ್ದಾರೆ.

ಒಗಟಿನಂತೆ ಪ್ರತಿಕ್ರಿಯಿಸಿದ ಶ್ರೀಗಳು:
ಮಾಧ್ಯಮ ಪ್ರತಿನಿಧಿಗಳು ರಾಜ್ಯ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಸನ್ಯಾಸಿ ತಪಸ್ಸಿಗೆ ಕುಳಿತಿದ್ದನಂತೆ. ಅದೇ ವೇಳೆ ಒಬ್ಬ ಬೇಡ ಜಿಂಕೆಯನ್ನು ಅಟ್ಟಿಸಿಕೊಂಡು ಬಂದನಂತೆ. ಸನ್ಯಾಸಿ ಬಳಿ ಬಂದು, ‘ಏನ್ ಸ್ವಾಮಿ ಇಲ್ಲಿ ಜಿಂಕೆ ಓಡಿಹೋಯಿತೇ’ ಎಂದು ಪ್ರಶ್ನಿಸಿದನಂತೆ. ಸನ್ಯಾಸಿ ಉಭಯ ಸಂಕಟಕ್ಕೆ ಬಿದ್ದ. ಹೌದು ಎಂದರೆ ಜಿಂಕೆಯನ್ನು ಕೊಲ್ಲುವಂತೆ ಮಾಡಿದ ಪಾಪ ಬರುತ್ತದೆ. ಅಲ್ಲ ಎಂದರೆ ಸುಳ್ಳಾಡಿದ ಪಾಪ ಬರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ, ‘ಯಾವುದು ನೋಡಿತೋ ಅದು ಮಾತನಾಡಲ್ಲ. ಯಾವುದು ಮಾತನಾಡುತ್ತದೆಯೋ ಅದು ನೋಡಿಲ್ಲ’ ಎಂದನಂತೆ. ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ. ಬಾಯಿ ಮಾತನಾಡುತ್ತದೆ ಆದರೆ ನೋಡಲ್ಲ ಎಂದಿದ್ದಾರೆ. ಆದರೆ ಇದರ ಅರ್ಥ ಏನು ಅನ್ನೋದನ್ನು ಅವರು ಹೇಳಿಲ್ಲ.

ಇಷ್ಟೇ ಅಲ್ಲದೆ ರಾಷ್ಟ್ರ ರಾಜಕಾರಣದ ಬಗ್ಗೆಯೂ ತಾವು ಹಿಂದೆ ನುಡಿದಿದ್ದ ಭವಿಷ್ಯವನ್ನು ನೆಪಿಸಿಕೊಂಡಿದ್ದಾರೆ. ಅವುಗಳು ನಡೆದ ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ.

PM Surya Ghar Scheme: ಕೇಂದ್ರ ಕೊಡುವ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ?