Home News Kodi Shree prediction: ಮನುಷ್ಯ ಮಾಡಿದ ಪಾಪ ಕರ್ಮಗಳಿಗೆ ಕ್ಷಮೆ ಇಲ್ಲ, ಬಿಜೆಪಿ ಜೆಡಿಎಸ್‌ ಮೈತ್ರಿ...

Kodi Shree prediction: ಮನುಷ್ಯ ಮಾಡಿದ ಪಾಪ ಕರ್ಮಗಳಿಗೆ ಕ್ಷಮೆ ಇಲ್ಲ, ಬಿಜೆಪಿ ಜೆಡಿಎಸ್‌ ಮೈತ್ರಿ ವಿಚಾರದ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ!!!

Kodi Shree prediction
Image source: oneindia

Hindu neighbor gifts plot of land

Hindu neighbour gifts land to Muslim journalist

Kodi Shree prediction: ಹುಬ್ಬಳ್ಳಿ: ಲೋಕಸಭೆ ಚುನಾವಣೆ ದೇಶ ಸಿದ್ಧಗೊಳ್ಳುತ್ತಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಷ್ಟ್ರ ಹಾಗೂ ರಾಜಕಾರಣದ ಬಗ್ಗೆ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ(Kodi Shree prediction). ರಾಜ್ಯ ರಾಜಕೀಯದಲ್ಲಿ ಸ್ವಪಕ್ಷೀಯರಿಂದಲೇ ಕಚ್ಚಾಟದ ಬಗ್ಗೆ ಕೋಡಿ ಶ್ರೀ ಮಾತೊಂದನ್ನು ಹೇಳಿದ್ದಾರೆ.

ಅಸ್ಥಿರತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಉಂಟಾಗಲಿದೆ. ಯುಗಾದಿವರೆಗೆ ಎಲ್ಲರೂ ಕಾದು ನೋಡಿ. ನಂತರ ಏನಾಗುತ್ತೋ ನಿಮಗೇ ಗೊತ್ತಾಗುತ್ತದೆ ಎಂದು ರಾಜಕಾರಣದ ಬಗ್ಗೆ ಹೇಳಿದ್ದಾರೆ.

ರಾಜ್ಯದಲ್ಲಿ ಬರಗಾಲದ ಛಾಯೆ ವಿಚಾರ ಸಂದರ್ಭದ ಕುರಿತು ಮಾತನಾಡಿದ ಶ್ರೀಗಳು, ಮನುಷ್ಯ ಮಾಡಿದ ತಪ್ಪುಗಳಿಗೆ ದೇವರು ಕ್ಷಮೆ ನೀಡುತ್ತಾನೆ. ಆದರೆ ಮನುಷ್ಯ ಮಾಡಿದ ಪಾಪಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯ ಮಾಡಿದ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಕರ್ಮ ಭಾದೆಯಾದಾಗ, ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಲಿದೆ. ಅಮವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ.

ಬಿಜೆಪಿ ಜೆಡಿಎಸ್‌ ಮೈತ್ರಿ ವಿಚಾರ ಕುರಿತು ಅದು ಅವರವರ ವಿಚಾರ, ಇದರ ಬಗ್ಗೆ ಹೇಳಲಾಗುವುದಿಲ್ಲ. ದೊಡ್ಡ ದೊಡ್ಡ ನಗರಕ್ಕೆ ಆಪತ್ತಿದೆ. ಅಸ್ಥಿರತೆ ಎನ್ನುವುದು ರಾಜಕೀಯ ವ್ಯವಸ್ಥೆಯಲ್ಲಿ ಉಂಟಾಗಲಿದೆ ಎಂಬ ಮಾತನ್ನು ಪದೇ ಪದೇ ಹೇಳಿದ್ದಾರೆ.

ಸ್ವಪಕ್ಷದವರಿಂದಲೇ ರಾಜ್ಯ ರಾಜಕೀಯದಲ್ಲಿ ಕಚ್ಚಾಟ, ಮನುಷ್ಯನಿಗೆ ಅತೃಪ್ತಿ ಇರುವುದರಿಂದ ರಾಜಕೀಯದಲ್ಲಿ ಅಸಮಾಧಾನ ಸಹಜ ಎಂದು ಹೇಳಿದರು. ರಾಜ್ಯ ಆರ್ಥಿಕ ಸ್ಥಿತಿ ಸಂಪದ್ಭರಿತವಾಗಿರಲಿದೆ, ಜನ ಸಾಮಾನ್ಯರಿಗೆ ಸಾಕಷ್ಟು ಪ್ರಯೋಜನ ಆಗಲಿದೆ ಎಂದು ಹೇಳಿದರು.

ಇದನ್ನೂ ಓದಿ: Ayushman Bhava: ಪ್ರಧಾನಿ ಹುಟ್ಟುಹಬ್ಬದಂದು ಕೇಂದ್ರದಿಂದ ವಿಶೇಷ ಕಾರ್ಯಕ್ರಮ! ಇದರ ಲಾಭ ನಿಮಗೂ ಇದೆ, ಪ್ರಯೋಜನ ಪಡೆಯಿರಿ!!!