Home News KGF Babu: ಕೆಜಿಎಫ್ ಬಾಬುಗೆ ಮಗ ಮತ್ತು ಬೀಗನಿಂದ ಮಹಾಮೋಸ? 200 ಕೋಟಿ ಪಂಗನಾಮ?

KGF Babu: ಕೆಜಿಎಫ್ ಬಾಬುಗೆ ಮಗ ಮತ್ತು ಬೀಗನಿಂದ ಮಹಾಮೋಸ? 200 ಕೋಟಿ ಪಂಗನಾಮ?

Hindu neighbor gifts plot of land

Hindu neighbour gifts land to Muslim journalist

KGF Babu: ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಸಾಕಷ್ಟು ಸುದ್ದಿ ಆಗುತ್ತಿರುವ ಸಾವಿರಾರು ಕೋಟಿ ಒಡೆಯ ಕೆಜಿಎಫ್ ಬಾಬು ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ವೀಕ್ ಆಗಿದ್ದಾರೆ. ಆದರೆ ಇದೀಗ ಅವರು ಮತ್ತೆ ಮುನ್ನಡಗೆ ಬಂದಿರುವುದು ತನ್ನ ಮಗ ಮತ್ತು ಬೀಗನಿಂದ ಆದ ಮೋಸದಿಂದ.

ಹೌದು, ಕೆಜಿಎಫ್ ಬಾಬುಗೆ ಅವರ ಮಗ ಮತ್ತು ಮಗನಿಗೆ ಹೆಣ್ಣು ಕೊಟ್ಟ ಮಾವನಿಂದಲೇ ಮಹಾ ಮೋಸ ಆಗಿದೆ ಎಂಬ ಸುದ್ದಿ ವೈರಲಾಗುತ್ತಿದೆ. ಇದನ್ನು ಸ್ವತಹ ಬಾಬು ಅವರೇ ಹಂಚಿಕೊಂಡಿದ್ದಾರೆ. ತನ್ನ ಮಗ ಹಾಗೂ ಬೀಗರು ಸೇರಿ ಮಾಡಿದ ಕೆಲಸದಿಂದಾಗಿ ನಾನು 200 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ಅವರು ಆರೋಪ ಮಾಡಿದ್ದಾರೆ.

ತನಗೆ ಮಗ ಮತ್ತು ಅವನ ಮಾವನಿಂದ ಸಂಕಷ್ಟ ಎದುರಾಗಿದೆ ಎಂದು ಅವರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಮಗನ ಮದುವೆಗೆ ಮುಂಚೆ ಅವರ ಬೀಗ ಗುಲಾಂ ಮುಸ್ತಾಫಾ ಎನ್ನುವವರು ಎಸ್​ಬಿಐನಲ್ಲಿ ರೂ. 60 ಕೋಟಿ ಸಾಲ ಮಾಡಿದ್ದಾರಂತೆ. ಅದರೆ ಅದರಲ್ಲಿ ಕೇವಲ ಅದರಲ್ಲಿ ಕೇವಲ ₹15 ಕೋಟಿ ಮರುಪಾವತಿ ಮಾಡಿ ₹45 ಕೋಟಿ ಬಾಕಿ ಕಟ್ಟದೆ ಇದ್ದಾಗ ಬಾಬು ಅವರೇ ತಮ್ಮ ₹ 200 ಕೋಟಿಯ ಆಸ್ತಿಯನ್ನು ಅಡಮಾನ ಇಟ್ಟು ಮುಸ್ತಾಫಾರನ್ನು ಸಂಕಷ್ಟದಿಂದ ಪಾರು ಮಾಡಿದ್ದರಂತೆ.

ಮುಸ್ತಾಫಾ ಜೊತೆ ಪಾಲುದಾರನಾಗಿದ್ದ ಸಂಸ್ಥೆಯೊಂದು ₹45 ಕೋಟಿ ಬಾಕಿಯಲ್ಲಿ 15 ಕೋಟಿ ಬ್ಯಾಂಕ್​​ಗೆ ಪಾವತಿಸಿದರೂ ಮುಸ್ತಾಫಾ ಮಾತ್ರ ಏನನ್ನೂ ಪಾವತಿಸಿಲ್ಲ, ₹30 ಕೋಟಿ ಬ್ಯಾಂಕ್ ಸಾಲ ಹಾಗೆಯೇ ಇದೆ ಎಂದು ಬಾಬು ಹೇಳುತ್ತಾರೆ.