Home News Karnataka: ಜಪಾನ್ ಕಂಪನಿಗಳಿಗೆ 300 ಎಕರೆ ಭೂಮಿ ನೀಡಲು ಮುಂದಾದ ರಾಜ್ಯ ಸರ್ಕಾರ !!

Karnataka: ಜಪಾನ್ ಕಂಪನಿಗಳಿಗೆ 300 ಎಕರೆ ಭೂಮಿ ನೀಡಲು ಮುಂದಾದ ರಾಜ್ಯ ಸರ್ಕಾರ !!

Hindu neighbor gifts plot of land

Hindu neighbour gifts land to Muslim journalist

Karnataka: ಜಪಾನಿನ ಕಂಪನಿಗಳು ಕರ್ನಾಟಕದಲ್ಲಿ ತಮ್ಮ ಕಂಪನಿ ಸ್ಥಾಪಿಸಲು 300 ಎಕರೆಗಳಿಗೂ ಹೆಚ್ಚು ಭೂಮಿಯನ್ನು ಮೀಸಲಿಡಲಾಗಿದೆಯಂತೆ. ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಕರ್ನಾಟಕ ಸರ್ಕಾರ) ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವ ಕುಮಾರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (BCIC) ಆಯೋಜಿಸಿದ್ದ 3ನೇ ಭಾರತ-ಜಪಾನ್ ವ್ಯವಹಾರ ಶೃಂಗಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಮಡಿಕೆ ಮಾತನಾಡಿದ ಸೆಲ್ವ ಕುಮಾರ್ ಅವರು ತುಮಕೂರಿನಲ್ಲಿರುವ ಜಪಾನೀಸ್ ಕೈಗಾರಿಕಾ ಪಟ್ಟಣದಂತಹ ಯೋಜನೆಗಳು ಭವಿಷ್ಯದ ಬೆಳವಣಿಗೆಗೆ ಬೆಂಬಲ ನೀಡಲು ನಮ್ಮನ್ನು ಪ್ರೇರೇಪಿಸುತ್ತವೆ ಎಂದು ಹೇಳಿದರು. ಅಲ್ಲದೆ ಜಪಾನಿನ ಕಂಪನಿಗಳಿಗೆ ಕರ್ನಾಟಕ ಸಂಪೂರ್ಣ ಬೆಂಬಲ ಕೊಡುವುದಾಗಿ ಭರವಸೆ ನೀಡಿದರು.

ಇನ್ನು ಬೆಂಗಳೂರಿನಲ್ಲಿರುವ ಜಪಾನ್‌ನ ಕಾನ್ಸುಲ್ ಜನರಲ್ ನಕಾನೆ ಟ್ಸುಟೊಮು ಮಾತನಾಡಿ ಬೆಂಗಳೂರಿನ ಬಲವಾದ ಮಾಹಿತಿ ತಂತ್ರಜ್ಞಾನ (IT) ಪರಿಸರ ವ್ಯವಸ್ಥೆಯು ನಗರದಲ್ಲಿ (ಮತ್ತು ರಾಜ್ಯದಲ್ಲಿ) ಜಪಾನಿನ ಕಂಪನಿಗಳ ಹೂಡಿಕೆಗೆ ಸೂಕ್ತಸ್ಥಳವಾಗಿದೆ. ಜಪಾನಿನ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಭಾರತೀಯ ಮಾರುಕಟ್ಟೆಗೆ ತರಲು ಉದ್ದೇಶಿಸಿದೆ ಎಂದು ಹೇಳಿದರು.