Home News Karnataka Bandh: ಕರ್ನಾಟಕ ಬಂದ್‌: ಯಾವ ಜಿಲ್ಲೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ದೊರೆತಿದೆ?

Karnataka Bandh: ಕರ್ನಾಟಕ ಬಂದ್‌: ಯಾವ ಜಿಲ್ಲೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ದೊರೆತಿದೆ?

Hindu neighbor gifts plot of land

Hindu neighbour gifts land to Muslim journalist

Karnataka Bandh: ಬೆಳಗಾವಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌, ಮೇಲೆ ನಡೆದ ಮರಾಠಿ ಪುಂಡರ ದಾಳಿ ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿದ್ದವು. ಶಾಲ ಕಾಲೇಜ್ಗಳಿಗೆ ರಜೆ ಘೋಷಿಸದ್ದು ಬಿಟ್ಟರೆ ಬೆಂಗಳೂರು(Bengaluru) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಬಂದ್ಗೆ ಕಾರಣವಾದ ಪ್ರಮುಖ ಕೇಂದ್ರ ಬೆಳಗಾವಿಯಲ್ಲೇ (Belagavi) ಜನಜೀವನ ಯಥಾ ಸ್ಥಿತಿಯಲ್ಲಿ ಇದೆ. ಬಂದ್ಗೆ ಹೇಳಿಕೊಳ್ಳುವಂತ ಪ್ರತಿಕ್ರಿಯೆ ಈವರೆಗೆ ದೊರಕಿಲ್ಲ. ಬೆಂಗಳೂರು ನಗರದ ಪ್ರಮುಖ ಪ್ರದೇಶಗಳಲ್ಲಿ ಬಸ್, ಆಟೋ ಓಡಾಟ ಎಂದಿನಂತೆಯೇ ಓಡಾಟ ನಡೆಸುತ್ತಿದೆ. ಶನಿವಾರ ಆಗಿರುವುದರಿಂದ ಸಂಚಾರ ದಟ್ಟಣೆ ತುಸು ಕಡಿಮೆ ಇದೆ.

ಕರ್ನಾಟಕ ಬಂದ್‌ಗೆ ಬೆಂಗಳೂರು ಸೇರಿದಂತೆ ವಿವಿಧೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ BMTC, ಆಟೋ, ಕ್ಯಾಬ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಬೆಳಗಾವಿ, ದಾವಣಗೆರೆಯಲ್ಲಿಯೂ ಜನಜೀವನ ಸಾಮಾನ್ಯವಾಗಿದೆ ಎಂದು ವರದಿ ಹೇಳಿದೆ. ಮಂಡ್ಯದಲ್ಲಿ ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಚಿಕ್ಕಮಗಳೂರಿನಲ್ಲಿ ಕೆಲವರು ಬಲವಂತವಾಗಿ ಅಂಗಡಿ ಮುಚ್ಚಿಸಲು ಯತ್ನಿಸಿದ ಘಟನೆ ನಡೆದಿದೆ.