Home News Karnataka: ಕರ್ನಾಟಕದಲ್ಲಿ 20 ಔಷಧ ಪರವಾನಗಿ ರದ್ದು, 133 ಔಷಧ ಪರವಾನಗಿಗಳ ಅಮಾನತು!

Karnataka: ಕರ್ನಾಟಕದಲ್ಲಿ 20 ಔಷಧ ಪರವಾನಗಿ ರದ್ದು, 133 ಔಷಧ ಪರವಾನಗಿಗಳ ಅಮಾನತು!

Hindu neighbor gifts plot of land

Hindu neighbour gifts land to Muslim journalist

Karnataka: ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಜೂನ್ ತಿಂಗಳಿನಲ್ಲಿ 133 ಔಷಧ ಪರವಾನಗಿಗಳನ್ನು ಅಮಾನತುಗೊಳಿಸಿ, 20 ಔಷಧ ಪರವಾನಗಿಗಳನ್ನು ರದ್ದುಗೊಳಿಸಿದ್ದಾರೆ.

2,544 ಕಡೆ ತಪಾಸಣೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿನ ಔಷಧ ಪರೀಕ್ಷಾ ಪ್ರಯೋಗಾಲಯಗಳು ಜೂನ್‌ನಲ್ಲಿ 1,333 ಮಾದರಿಗಳನ್ನು ಪರಿಶೀಲಿಸಿವೆ. ಅವುಗಳಲ್ಲಿ 1,292 ಮಾದರಿಗಳನ್ನು ಪ್ರಮಾಣಿತ ಗುಣಮಟ್ಟ ಹೊಂದಿದ್ದರೆ, 41 ಪ್ರಮಾಣಿತ ಗುಣಮಟ್ಟದ್ದಲ್ಲ ಎಂದು ಘೋಷಿಸಲಾಗಿದೆ. ಸರ್ಕಾರದ ನಡೆಯಿಂದ 40 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಇನ್ನೂ ಕೆಲವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.