Home News Karkala: ಕಾರ್ಕಳ:ಅಂದರ್ ಬಾಹರ್ ಜುಗಾರಿ ಆಟ: 7 ಮಂದಿ ವಶಕ್ಕೆ!

Karkala: ಕಾರ್ಕಳ:ಅಂದರ್ ಬಾಹರ್ ಜುಗಾರಿ ಆಟ: 7 ಮಂದಿ ವಶಕ್ಕೆ!

Hindu neighbor gifts plot of land

Hindu neighbour gifts land to Muslim journalist

Karkala: ಕೌಡೂರು ಗ್ರಾಮದ ಎಲಿಯಾಳ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ 7 ಮಂದಿ ಆರೋಪಿಗಳನ್ನು ಏ. 27ರಂದು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಪಳ್ಳಿ ಗ್ರಾಮದ ಬೊಬ್ಬರಪಲ್ಕೆಯ ಗಣೇಶ (38), ಕೌಡೂರಿನ ಮಂಜುನಾಥ (33), ಬೈಲೂರಿನ ರಾಕೇಶ (24), ಕಡಂದಲೆಯ ಗಣೇಶ (46), ಉಡುಪಿಯ ಬೇಲೆಕೆರೆಯ ಸೋಮ ಸುಂದರ (45), ಸಂಜೀವ ಬಾಣಲೆ, ಅಖಿಲೇಶ್‌ ಕಣಜಾರು ಮತ್ತು ಅವಿನಾಶ್ ಜನ್ನ ಬೈಲೂರು ಬಂಧಿತ ಆರೋಪಿಗಳು.

ಪೊಲೀಸ್‌ ಉಪನಿರೀಕ್ಷಕ ಸಂದೀಪ್ ಕುಮಾ‌ರ್ ಶೆಟ್ಟಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 33,035 ರೂ. ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.