Home News Kantara 1: ಶೂಟಿಂಗ್‌ ವೇಳೆ ದೋಣಿ ಅವಘಡ: ಸ್ಪಷ್ಟನೆ ನೀಡಿದ ಹೊಂಬಾಳೆ

Kantara 1: ಶೂಟಿಂಗ್‌ ವೇಳೆ ದೋಣಿ ಅವಘಡ: ಸ್ಪಷ್ಟನೆ ನೀಡಿದ ಹೊಂಬಾಳೆ

Hindu neighbor gifts plot of land

Hindu neighbour gifts land to Muslim journalist

Rishab Shetty: ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ʼಕಾಂತಾರ-1′ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ದೋಣಿ ಮಗುಚಿ ಬಿದ್ದ ಘಟನೆಗೆ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆಯನ್ನು ನೀಡಿದೆ.

ಜೂನ್‌ 14 (ಶನಿವಾರ ) ರಾತ್ರಿ ಚಿತ್ರದ ಕೊನೆಯ ಹಂತದ ಶೂಟಿಂಗ್‌ಗೆಂದು ತೀರ್ಥಹಳ್ಳಿಯ ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್‌ ನಡೆಯುತ್ತಿದ್ದಾಗ, ದೋಣಿ ಮಗುಚಿದೆ ಎಂದು ಹೇಳಲಾಗಿದೆ. ಇದರಲ್ಲಿ ರಿಷಬ್‌ ಶೆಟ್ಟಿ ಸೇರಿ 30 ಮಂದಿ ಸ್ಥಳದಲ್ಲಿದ್ದರು. ಕ್ಯಾಮೆರಾ ಮತ್ತು ಇತರ ಸಾಮಾಗ್ರಿಗಳು ನೀರು ಪಾಲಾಗಿದೆ ಎಂದು ಹೇಳಲಾಗಿತ್ತು.

ಈ ಕುರಿತು ಹೊಂಬಾಳೆ ಫಿಲ್ಮ್‌ ಎಕ್ಸಿಕ್ಯೂಟಿವ್‌ ಪ್ರೊಡ್ಯೂಸರ್‌ ಆದರ್ಶ್‌ ಅವರು ಮಾಧ್ಯಮಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಮಾಣಿ ಹಿನ್ನೀರಿನಲ್ಲಿ ಕಾಂತಾರ ಚಾಪ್ಟರ್ 1′ ಚಿತ್ರೀಕರಣ ನಡೆಯುತ್ತಿದೆ. ಬ್ಯಾಕ್ ಡ್ರಾಪ್ (ಹಿನ್ನೆಲೆ) ಗೋಸ್ಕರ ಹಡಗಿನ ಸೆಟ್‌ನ್ನು ಹಾಕಲಾಗಿತ್ತು. ಜೋರಾದ ಗಾಳಿ -ಮಳೆಯಿಂದ ಶಿಪ್ ಪಲ್ಟಿಯಾಗಿದೆ. ನಮ್ಮ ತಂಡದವರು ಯಾರೂ ಕೂಡ ಅದರ ಸುತ್ತಮುತ್ತ ಇರಲಿಲ್ಲ. ನಮ್ಮ ಶೂಟಿಂಗ್ ದೂರದಲ್ಲಿ ನಡೆಯುತ್ತಿತ್ತು. ಚಿತ್ರೀಕರಣ ಸಂದರ್ಭದಲ್ಲಿ ಯಾರಿಗೂ ಯಾವುದೇ ಅವಘಡ ಸಂಭವಿಸಿಲ್ಲ. ಈಗ ಶೂಟಿಂಗ್ ಮುಂದುವರೆಸಿದ್ದೇವೆ” ಎಂದಿದ್ದಾರೆ.

“ಚಿತ್ರೀಕರಣಕ್ಕೆ ಬೇಕಾದ ಅನುಮತಿಯನ್ನು ಸಂಬಂಧಪಟ್ಟ ಎಲ್ಲಾಇಲಾಖೆಯಿಂದ ಪಡೆದುಕೊಂಡಿದ್ದೇವೆ. ನಾವು ನೀರಿನ ಭಾಗದಲ್ಲಿ ಯಾವುದೇ ರೀತಿಯ ಚಿತ್ರೀಕರಣವನ್ನು ಮಾಡುತ್ತಿಲ್ಲ. ಆದ್ರೂ ಸೇಫ್ಟಿಗೋಸ್ಕರ ಸ್ಪೀಡ್ ಬೋಟ್, 25 ಜನ ಮೀನುಗಾರರು – ಈಜುಗಾರರು, ಸ್ಕೂಬಾ ಡ್ರೈವರ್ಸ್, ಲೈಪ್ ಜಾಕೆಟ್ ಎಲ್ಲವನ್ನು ಇಟ್ಟುಕೊಂಡು ಶೂಟಿಂಗ್ ಮಾಡುತ್ತಿದ್ದೇವೆ” ಎಂದಿದ್ದಾರೆ.