Home News Gujarat: ಗುಜರಾತಿನ ಜಾಮ್‌ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Gujarat: ಗುಜರಾತಿನ ಜಾಮ್‌ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Hindu neighbor gifts plot of land

Hindu neighbour gifts land to Muslim journalist

Gujarat: ಕನ್ನಡ ಸಂಘ, ಏರ್‌ಫೋರ್ಸ್ ಸ್ಟೇಶನ್ ಜಾಮ್ನಗರ (ಗುಜರಾತ್) ಇದರ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನವೆಂಬರ್ ೬ ರಂದು ಜಾಮ್‌ನಗರದಲ್ಲಿ ಸಂಪನ್ನಗೊಂಡಿತು. ಜಾಮ್ ನಗರದ ವಾಯುನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗರೆಲ್ಲರೂ ಒಟ್ಟು ಸೇರಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಕನ್ನಡ ಭುವನೇಶ್ವರಿ ತಾಯಿಯ ಪೂಜೆಯನ್ನು ಮಾಡಿ, ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕನ್ನಡ ಸಂಘದ ಎಲ್ಲಾ ಸದಸ್ಯರು ಒಟ್ಟಾಗಿ ನಾಡಗೀತೆಯನ್ನು ಹಾಡಿದರು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಕನ್ನಡ ಸಂಘದ ಸದಸ್ಯರಾದ ಬೆಳಗಾವಿಯ ಶಿವಾನಂದ್ ಇವರು ಎಲ್ಲರನ್ನು ಸ್ವಾಗತಿಸಿದರು ಹಾಗೂ ಕನ್ನಡ ನಾಡು, ನುಡಿಯ ಬಗ್ಗೆ ಕರ್ನಾಟಕ ರಾಜ್ಯೋತ್ಸವದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕನ್ನಡ ಸಂಘದ ಹಿರಿಯ ಸದಸ್ಯರಾದ ಬೆಂಗಳೂರಿನ ನವೀನ್ ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ, “ನಾವು ಎಲ್ಲೇ ಇದ್ದರು, ಕನ್ನಡದ ಕಂಪನ್ನು ಪಸರಿಸುವ ಕಾರ್ಯ ಮಾಡಬೇಕು, ಈ ನಿಟ್ಟಿನಲ್ಲಿ ಜಾಮ್‌ನಗರದಲ್ಲಿ ಏರ್ಪಡಿಸಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾದದ್ದು. ನಾವು ಹುಟ್ಟಿದ ನೆಲದಿಂದ ದೂರ ಬಂದಾಗ ನಮ್ಮಂತೆಯೇ ಆ ನೆಲದಿಂದ ಬಂದ ಮತ್ತೊಬ್ಬರು ಸಿಕ್ಕಿದರೆ ಆತ್ಮೀಯತೆ ಬೆಳೆಯುತ್ತದೆ. ಇಂದು ಇಲ್ಲಿ ಕರ್ನಾಟಕದದ ವಿವಿಧ ಜಿಲ್ಲೆಗಳ ಕನ್ನಡಿಗರು ಯಾವುದೇ ಬೇಧ ಭಾವವಿಲ್ಲದೆ ಒಟ್ಟಾಗಿ ಸೇರಿರುವುದು ಸಂತೋಷದ ಸಂಗತಿ. ರಾಜ್ಯೋತ್ಸವವನ್ನು ಆಚರಿಸುವುದರಿಂದ ನಮ್ಮ ಮಕ್ಕಳಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ, ಮಾತೃ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆ.

ಕನ್ನಡವನ್ನು ಉಳಿಸೋಣ, ಬಳಸೋಣ ಮತ್ತು ಬೆಳೆಸೋಣ” ಎಂದರು. ಕನ್ನಡ ಸಂಘದ ಸದಸ್ಯರಾದ ಪ್ರಶಾಂತ್ ವಿಜಯಪುರ, ಅಜಿತ್ ಕುಮಾರ್, ಸಂತೋಷ್ ಪಾಟೀಲ್, ವಿಜಯ್ ಪಾಟೀಲ್, ರಾಘವೇಂದ್ರ, ಉಮೇಶ್, ಚಂದ್ರಶೇಖರ್, ಭರತ್ ಗೌಡ, ಸಂದೀಪ್ ಶೆಟ್ಟಿ, ಸಾಯಿನಾಥ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರಿನ ದುರ್ಗಾಕಾವೇರಿ ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿ, ಪರಂಪರೆಯನ್ನು ಬಿಂಬಿಸುವಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನೃತ್ಯ, ಗಾಯನ ಹಾಗೂ ಇನ್ನಿತರ ಕಾರ್ಯಕ್ರಮಗಳು ಸುಂದರವಾಗಿ ಮೂಡಿಬಂದವು. ತಾಯ್ನೆಲದಿಂದ ದೂರ ಇದ್ದು ದೇಶ ಸೇವೆಯನ್ನು ಮಾಡುತ್ತಿರುವ ಸೈನಿಕರ ಮಕ್ಕಳು ಹಾಗೂ ಮನೆಯವರು ಅತೀ ಉತ್ಸಾಹದಿಂದ ಕನ್ನಡದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.