Home News Dr.Bro ಅವರಿಂದ Instagram ಮೂಲಕ ಅಧಿಕೃತ ಮಾಹಿತಿ; ನಮಸ್ಕಾರ ದೇವ್ರು ಎನ್ನುತ್ತಾ ತಾನೆಲ್ಲಿರುವೆ ಎಂಬ ಮಾಹಿತಿ...

Dr.Bro ಅವರಿಂದ Instagram ಮೂಲಕ ಅಧಿಕೃತ ಮಾಹಿತಿ; ನಮಸ್ಕಾರ ದೇವ್ರು ಎನ್ನುತ್ತಾ ತಾನೆಲ್ಲಿರುವೆ ಎಂಬ ಮಾಹಿತಿ ಬಿಚ್ಚಿಟ್ಟ ಗಗನ್‌ ಶ್ರೀನಿವಾಸ್‌!!!

Dr.Bro

Hindu neighbor gifts plot of land

Hindu neighbour gifts land to Muslim journalist

Dr Bro: ಕನ್ನಡಿಗರು ಕುಳಿತಲ್ಲೇ ವಿಶ್ವವನ್ನು ನೋಡುವಂತಾಗಬೇಕು ಎಂದು ವಿಶ್ವಪರ್ಯಟನೆ ಮಾಡುತ್ತಾ, ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ ಬ್ರೋ(Dr Bro)ಜಗತ್ತಿನ ಬಹುತೇಕ ದೇಶಗಳ ದರ್ಶನ ಮಾಡಿಸುವ ಧ್ಯೇಯ ಹೊಂದಿರುವ ಇಡೀ ಕರುನಾಡಿನ ಚಿರಪರಿಚಿತ ವ್ಯಕ್ತಿ ಎಂದರೇ ತಪ್ಪಾಗದು.

ದೇಶ ದೇಶಗಳನ್ನು ಸುತ್ತುತ್ತ, ಅಚ್ಚಗನ್ನಡದಿಂದಲೇ ಎಲ್ಲವನ್ನೂ ಪರಿಚಯಿಸುತ್ತಾ, ಪ್ರತಿಯೊಬ್ಬರನ್ನೂ ರಂಜಿಸುತ್ತ ‘ನಮಸ್ಕಾರ ದೇವ್ರೂ’ ಎನ್ನುತ್ತ ಕನ್ನಡಿಗರ ಮನ ಗೆದ್ದಿರುವ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ ಬ್ರೋ(Dr Bro) ಅವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿತ್ತು. ದೇಶ ಪರ್ಯಟನೆ ಮಾಡುತ್ತಾ ದಿನಕ್ಕೊಂದು, ವಾರಕ್ಕೆರಡು ವಿಡಿಯೋಗಳನ್ನು ಯೂಟ್ಯೂಬ್ ಗಳಿಗೆ ಹರಿಬಿಡುತ್ತಾ ಎಲ್ಲರ ಕುತೂಹಲ ಕೆರಳಿಸುತ್ತಿದ್ದ ಡಾ ಬ್ರೋ ಒಂದು ತಿಂಗಳಿಂದ ತಮ್ಮ ಯೂಟ್ಯೂಬ್ ಗೆ ಯಾವುದೇ ವಿಡಿಯೋಗಳನ್ನು ಅಪ್ಲೋಡ್ ಮಾಡಿರಲಿಲ್ಲ. ಅಷ್ಟೇ ಸಾಲದು ಎಂಬಂತೆ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಆಕ್ಟೀವ್ ಆಗಿರಲಿಲ್ಲ. ಇದರಿಂದಾಗಿ ನಮ್ಮ ಪ್ರೀತಿಯ ಡಾ. ಬ್ರೋಗೆ ಏನಾಯ್ತು ಎಂಬ ಆತಂಕ ಅಭಿಮಾನಿಗಳ ವಲಯದಲ್ಲಿ ಮೂಡಿತ್ತು.

https://www.instagram.com/p/C1V8woLvTce/

ಸದ್ಯ, ಅಭಿಮಾನಿಗಳ ಗೊಂದಲ ಬಗೆ ಹರಿಸಲು ಡಾ. ಬ್ರೋ ಮುಂದಾಗಿದ್ದಾರೆ. ಹೌದು!! ತಮ್ಮ ಅಧಿಕೃತ ಇನ್ಸ್ತಾ ಗ್ರಾಂ ಪೇಜ್ ಮೂಲಕ ತಾನಿರುವ ಜಾಗದ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ಗಗನ್ ಶ್ರೀನಿವಾಸನ್ ಕೊಂಚ ಮಟ್ಟಿಗೆ ರಿಲೀಫ್ ನೀಡಿದ್ದಾರೆ. ದಿನಂಪ್ರತಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಡಾ ಬ್ರೋ ತಿಂಗಳಾದರೂ ವಿಡಿಯೋ ಅಪ್ಲೋಡ್ ಮಾಡದೇ ಇದ್ದುದ್ದರಿಂದ ಏನಾದರೂ ಸಮಸ್ಯೆಯ ಸುಳಿಯಲ್ಲಿ ಡಾಕ್ಟರ್ ಬ್ರೋ ಸಿಲುಕಿದ್ದಾರಾ ಎಂಬ ಅನುಮಾನ ಅಭಿಮಾನೀ ವಲಯದಲ್ಲಿ ಮೂಡಿತ್ತು. ಸದ್ಯ, ಡಾ. ಬ್ರೋ ಹಳ್ಳಿಯೊಂದರಲ್ಲಿ ಫೋಟೋ ಕಿಕ್ಕಿಸಿ ನಮಸ್ಕಾರ ದೇವ್ರು ಎಂದು ಅಡಿಬರಹದ ಜೊತೆಗೆ ಇನ್ಸ್ತಾಗ್ರಂ ಪೇಜ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಇದನ್ನು ಓದಿ: Karnataka: 5,8 & 9ನೇ ತರಗತಿ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟ!!