Home News Bigg boss: ಬಿಗ್​ಬಾಸ್​ ಮನೆಯಿಂದ ಹೊರಬಂದು ಪ್ರೆಸ್‌ಮೀಟ್‌ ಕರೆದ ಜಗದೀಶ್!

Bigg boss: ಬಿಗ್​ಬಾಸ್​ ಮನೆಯಿಂದ ಹೊರಬಂದು ಪ್ರೆಸ್‌ಮೀಟ್‌ ಕರೆದ ಜಗದೀಶ್!

Hindu neighbor gifts plot of land

Hindu neighbour gifts land to Muslim journalist

Bigg boss: ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರೆ ಮನೆಯಿಂದ ಹೊರ ಬೀಳೋದು ಗ್ಯಾರಂಟಿ. ಅಂತೆಯೇ ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್ 11 ರ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗಲಾಟೆ ಮಾಡಿಕೊಂಡು ಕೆಟ್ಟ ಪದಗಳಲ್ಲಿ ಬೈದಿದ್ದಕ್ಕೆ ಜಗದೀಶ್ ಅವರನ್ನು ಮನೆಯಿಂದ ಹೊರಗಡೆ ಹಾಕಲಾಗಿತ್ತು. ಜೊತೆಗೆ ದೈಹಿಕವಾಗಿ ನೂಕಾಟ ತಳ್ಳಾಟ ನಡೆಸಿದ್ದಾರೆ ಎನ್ನುವ ಕಾರಣಕ್ಕೆ ರಂಜಿತ್ ಅವರನ್ನು ಕೂಡ ಮನೆಯಿಂದ ಹೊರಗಡೆ ಕಳುಹಿಸಲಾಗಿದೆ.

ವಿಶೇಷ ಅಂದ್ರೆ ಇದೀಗ ಕನ್ನಡದ ಬಿಗ್​ಬಾಸ್​ ಸೀಸನ್​ 11 ರಿಂದ ಹೊರಹಾಕಲ್ಪಟ್ಟಿರುವ ಜಗದೀಶ್​ ಮನೆಯಿಂದ ಹೊರಬಂದ ಮೂರು ದಿನಗಳ ಬಳಿಕ ಮಾಧ್ಯಮ ಗೋಷ್ಟಿ ಕರೆದಿದ್ದು, ಅಕ್ಟೋಬರ್ 20ರಂದು ಬೆಳಿಗ್ಗೆ 9.00 ಘಂಟೆಗೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡ ಆಂಜನೇಯ ದೇವಸ್ಥಾನದಲ್ಲಿ ಮಾಧ್ಯಮಗಳ ಜೊತೆ ಮೊದಲ ಮಾತುಗಳು ಹಂಚಿ ಕೊಳ್ಳಲು ಕಾಯುತಿರುವೆ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಜಗದೀಶ್ ಇದಕ್ಕೂ ಮುನ್ನ ಫೇಸ್​ಬುಕ್​ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ವಕೀಲ್ ಸಾಬ್ ಬಿಗ್ ಬಾಸ್ ಮನೆಯ ಕ್ಲಿಕ್, ಲವ್ ಯೂ ಬಿಗ್ಬಾಸ್ ಎಂದು ಬರೆದುಕೊಂಡಿದ್ದಾರೆ.

ಅಂತೆಯೇ ‘ಐ ಮಿಸ್ ಬಿಗ್‌ಬಾಸ್‌’ ಎಂದಿದ್ದಾರೆ. ಈ ಕುರಿತು ವಾಯ್ಸ್ ನೋಟ್‌ ಕಳುಹಿಸಿರುವ ಅವರು, ‘ಬಿಗ್‌ ಬಾಸ್‌ ಕಾರ್ಯಕ್ರಮ ವ್ಯಕ್ತಿಯ ಜೀವನವನ್ನು ತೋರಿಸುವಂಥಾ ಕನ್ನಡಿ. ಅಲ್ಲಿ ನನ್ನ ನಿಜ ಮುಖ ನೋಡಿದಾಗ ನನಗೇ ಆಶ್ಚರ್ಯ ಆಯ್ತು. ನನ್ನಲ್ಲಿನ ಕೋಪ, ಪ್ರತಿಭೆ ಎಲ್ಲವೂ ಅರ್ಥವಾಗಿದೆ. ನಿಜವಾಗಿಯೂ ನಾವು ಅದೃಷ್ಟವಂತರು. ಎಷ್ಟೋ ಕೋಟಿ ಜನಗಳ ಮಧ್ಯೆ ಬಿಗ್‌ಬಾಸ್‌‌ನಲ್ಲಿ ಭಾಗಿಯಾಗುವ ಅವಕಾಶ ನಮ್ಮ ಅದೃಷ್ಟ. ಅದನ್ನು ವಿಭಿನ್ನವಾಗಿ ತೋರಿಸುವ ಮೀಡಿಯಾ, ಎಂಜಾಯ್‌ ಮಾಡಿದ ವೀಕ್ಷಕರು, ನನ್ನ ಅಭಿಮಾನಿ ದೇವರಿಗೆ ವಂದನೆಗಳು. ನಾನು ಬಿಗ್‌ ಬಾಸ್‌ ಮಿಸ್‌ ಮಾಡಿಕೊಳ್ತೇನೆ’ ಎಂದು ಇದರಲ್ಲಿ ಲಾಯರ್ ಜಗದೀಶ್‌ ಹೇಳಿದ್ದಾರೆ.

ಇನ್ನು ‘ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್, ಮಾನಸ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ, ನೀವೆಲ್ಲಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಕಲಾವಿದರಾಗಿದ್ದೀರಿ. ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೆ, ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿವೆ. ಅದು ನಟನೆ, ಮನರಂಜನೆಯ ಒಂದು ಭಾಗವಷ್ಟೆ, ವೈಯುಕ್ತಿಕ ದ್ವೇಷ ಯಾವುದೂ ಇಲ್ಲ’ ಎಂದು ಸಂದೇಶದಲ್ಲಿ ಜಗದೀಶ್‌ ತಿಳಿಸಿದ್ದಾರೆ.

ಒಟ್ಟಿನಲ್ಲಿ ದಿನಕ್ಕೊಂದು ರೀತಿ ಮಾತನಾಡುವ ಜಗದೀಶ್ ಪ್ರೆಸ್ ಮೀಟ್ ಮುಂದೆ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.