Home News Mahakumbha: ಮೃತ್ಯುಕುಂಭವಲ್ಲ ಕುಂಭಮೇಳ, ʼಮೃತ್ಯುಂಜಯʼ ಕುಂಭ-ಯೋಗಿ ಆದಿತ್ಯನಾಥ್‌!

Mahakumbha: ಮೃತ್ಯುಕುಂಭವಲ್ಲ ಕುಂಭಮೇಳ, ʼಮೃತ್ಯುಂಜಯʼ ಕುಂಭ-ಯೋಗಿ ಆದಿತ್ಯನಾಥ್‌!

Yogi Adithyanath

Hindu neighbor gifts plot of land

Hindu neighbour gifts land to Muslim journalist

Mahakumba: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ‘ಮಹಾಕುಂಭದಲ್ಲಿ 40 ರಿಂದ 50 ಕೋಟಿ ಜನ ಭಾಗಿಯಾಗಬಹುದು ಎಂದು ಹೇಳಿದ್ದೆ. ಆದರೆ ನಕಾರಾತ್ಮಕ ಹೇಳಿಕೆಗಳು ಮಹಾಕುಂಭದ ಸಮಯದಲ್ಲಿ ಹೆಚ್ಚಾದ ಕಾರಣ ಅವರಿಗೆ ಜನರೇ ಬುದ್ಧಿ ಕಲಿಸಿದ್ದಾರೆ. ಬಡವ, ಶ್ರೀಮಂತ ಎನ್ನುವ ಬೇಧವಿಲ್ಲದೇ ಎಲ್ಲರೂ ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಸನಾತನ ಧರ್ಮ ಇಡೀ ಜಗತ್ತಿನ ಎದುರು ಪ್ರಚಾರಗೊಂಡಿದೆ. ಕುಂಭಮೇಳವನ್ನು ಮೃತ್ಯುಕುಂಭ ಎಂದು ಕರೆದರು. ಆದರೆ ಇದು ಮೃತ್ಯುಕುಂಭವಲ್ಲ ಮೃತ್ಯುಂಜಯ ಮಹಾಕುಂಭ ಎಂದು ಭಕ್ತಾಧಿಗಳು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.