Home News Dharmasthala Case: ‘ಇದು ತನಿಖೆಯೋ, ದೊಂಬಿಯೋʼ-ಶಾಸಕ ಸುನಿಲ್‌ ಕುಮಾರ್‌

Dharmasthala Case: ‘ಇದು ತನಿಖೆಯೋ, ದೊಂಬಿಯೋʼ-ಶಾಸಕ ಸುನಿಲ್‌ ಕುಮಾರ್‌

Hindu neighbor gifts plot of land

Hindu neighbour gifts land to Muslim journalist

Dharmasthala Case: ಧರ್ಮಸ್ಥಳದಲ್ಲಿ ನಡೆಯುತ್ತಿರುವ ತಲೆಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಿಂದೂ ಶ್ರದ್ಧಾ ಕೇಂದ್ರದ ವಿರುದ್ಧದ ವ್ಯವಸ್ಥಿತ ಅಪಪ್ರಚಾರ ಎಂದು ಹೇಳಿದ್ದಾರೆ. ಇದು ತನಿಖೆಯಲ್ಲ, ಬದಲಾಗಿ ದೊಂಬಿ ಎಂದು ಜನ ಹೇಳಿದ್ದು, ಸರಕಾರದ ಸಹನೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಹೋರಾಟ, ತನಿಖೆ ಜನರ ನಂಬಿಕೆಯನ್ನು ಘಾಸಿಗೊಳಿಸುವಂತಿರಬಾರದು. ಧರ್ಮಸ್ಥಳದ ತನಿಖೆಯ ಹೆಸರಿನಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಾಗೃತ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಜನರು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Dharmasthala Case: ಠಾಣೆಗೆ ಮಧ್ಯಾಹ್ನದ ಬಳಿಕ ಬಂದ ದೂರುದಾರ – ಕಾದು ಕಾದು ಸುಸ್ತಾದ ಪೊಲೀಸ್ !!