Home News ವಕ್ಫ್ ಆಸ್ತಿಗಳನ್ನು ಮರಳಿ ಪಡೆಯಲು ಸಾಧ್ಯವಿದೆ- ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮನವರಿಕೆ

ವಕ್ಫ್ ಆಸ್ತಿಗಳನ್ನು ಮರಳಿ ಪಡೆಯಲು ಸಾಧ್ಯವಿದೆ- ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮನವರಿಕೆ

Hindu neighbor gifts plot of land

Hindu neighbour gifts land to Muslim journalist

New delhi : ಸರ್ಕಾರಿ ಭೂಮಿಯ ಮೇಲೆ ಯಾರಿಗೂ ಹಕ್ಕು ಸಾಧಿಸಲು ಅವಕಾಶ ಇಲ್ಲ ಹಾಗೂ ವಕ್ಫ್ ತತ್ವ ಆದರಿಸಿ ವಕ್ಫ್ ಎಂದು ಘೋಷಿಸಲಾದಂತಹ ಆಸ್ತಿಯನ್ನು ಮರಳಿ ಪಡೆಯಬಹುದು ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.

ವಕ್ಫ್ (ತಿದ್ದುಪಡಿ) ಕಾಯ್ದೆ, 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಿದಂತಹ ತುಷಾರ್ ಮೆಹ್ತಾ ನ್ಯಾಯ ಪೀಠದ ಮುಂದೆ ಕೇಂದ್ರದ ಪರವಾಗಿ ತಮ್ಮ ವಾದ ಮಂಡಿಸಿದ್ದಾರೆ. “ಸರ್ಕಾರಿ ಭೂಮಿಯ ಮೇಲೆ ಯಾರಿಗೂ ಹಕ್ಕಿಲ್ಲ” ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಕಾನೂನು ಅಧಿಕಾರಿ ಹೇಳಿದ್ದು, “ಸರ್ಕಾರಕ್ಕೆ ಸೇರಿದ್ದರೆ ಮತ್ತು ವಕ್ಫ್ ಎಂದು ಘೋಷಿಸಿದ್ದರೆ ಸರ್ಕಾರವು ಆಸ್ತಿಯನ್ನು ಉಳಿಸಬಹುದು ಎಂದು ಹೇಳುವಂತಹ ಸುಪ್ರೀಂ ಕೋರ್ಟ್ ತೀರ್ಪು ಇದೆ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.

ಜಂಟಿ ಸಂಸದೀಯ ಸಮಿತಿಯ ವರದಿ ಮತ್ತು ಕಾಯ್ದೆ ಜಾರಿಗೆ ಬರುವ ಮೊದಲು ಅನೇಕ ರಾಜ್ಯ ಸರ್ಕಾರಗಳು ಮತ್ತು ರಾಜ್ಯ ವಕ್ಫ್ ಮಂಡಳಿಗಳೊಂದಿಗೆ ಸಮಾಲೋಚಿಸಲಾಗಿತ್ತು ಎಂಬ ಅಂಶವನ್ನು ತುಷಾರ್ ಮೆಹ್ತಾ ಉಲ್ಲೇಖಿಸಿದ್ದು, ಜಿಲ್ಲಾಧಿಕಾರಿಗಳ ಶ್ರೇಣಿಗಿಂತ ಮೇಲಿನ ಅಧಿಕಾರಿಯೊಬ್ಬರು ವಕ್ಫ್ ಆಸ್ತಿಗಳು ಸರ್ಕಾರದವು ಎಂಬ ಆಧಾರದ ಮೇಲೆ ಅವುಗಳ ಮೇಲಿನ ಹಕ್ಕನ್ನು ನಿರ್ಧರಿಸಬಹುದು ಎಂಬ ಅರ್ಜಿದಾರರ ಮನವಿಯ ಕುರಿತು ಪೀಠವು ಕೇಂದ್ರದಿಂದ ಪ್ರತಿಕ್ರಿಯೆಯನ್ನು ಕೋರಿತ್ತು. ಇದು ಕೇವಲ ದಾರಿ ತಪ್ಪಿಸುವ ವಾದವಲ್ಲ ಆದರೆ ಸುಳ್ಳು ವಾದ ಎಂದು ಮೆಹ್ತಾ ತಿಳಿಸಿದ್ದಾರೆ.

ಕೇಂದ್ರವು ತನ್ನ ಲಿಖಿತ ಟಿಪ್ಪಣಿಯಲ್ಲಿ, ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ ನೀಡಬೇಕಾದ ಗಂಭೀರತೆ ಇಲ್ಲ ಎಂಬುದಾಗಿ ತುಷಾರ್ ಮೆಹ್ತಾ ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.