Home News Iran Israel war: ಬಂಕರ್‌ನಲ್ಲಿ ಅಡಗಿ ಕುಳಿತ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ – ಕೊಲ್ಲುವ...

Iran Israel war: ಬಂಕರ್‌ನಲ್ಲಿ ಅಡಗಿ ಕುಳಿತ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ – ಕೊಲ್ಲುವ ಇಸ್ರೇಲ್ ಯೋಜನೆಯನ್ನು ತಡೆದ ಟ್ರಂಪ್‌

Hindu neighbor gifts plot of land

Hindu neighbour gifts land to Muslim journalist

Iran Israel war: ಇಸ್ರೇಲ್ ದಾಳಿ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬವನ್ನು ಈಶಾನ್ಯ ಟೆಹ್ರಾನ್‌ನ ಲವಿಜಾನ್‌ನಲ್ಲಿರುವ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಯಿತು ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಮಶಾದ್ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ದಾಳಿಯು ಖಮೇನಿಗೆ “ಅವರು ಎಲ್ಲಿಯೂ ಸುರಕ್ಷಿತವಾಗಿಲ್ಲ” ಎಂಬ ಎಚ್ಚರಿಕೆಯಾಗಿದೆ ಎಂದು ವರದಿ ಹೇಳಿದೆ. ಇಸ್ರೇಲ್ ಶುಕ್ರವಾರ ಇರಾನ್ ಮೇಲೆ ದಾಳಿ ಆರಂಭಿಸಿತು.

ಖಮೇನಿಯ ಕೊಲ್ಲುವ ಇಸ್ರೇಲ್ ಯೋಜನೆಯನ್ನು ತಡೆದ ಟ್ರಂಪ್‌ ರಾಯಿಟರ್ಸ್‌

ವರದಿಯ ಪ್ರಕಾರ, ಇರಾನ್‌ನ ಸರ್ವೋಚ್ಛ ನಾಯಕ ಅಯನೊಲ್ಲಾ ಅಲಿ ಖಮೇನಿ ಅವರನ್ನು ಕೊಲ್ಲುವ ಇಸ್ರೇಲ್‌ನ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇತ್ತೀಚೆಗೆ ತಡೆದಿದ್ದಾರೆ. ಇರಾನಿಯನ್ನರು ಇದುವರೆಗೆ ಯಾವುದೇ ಅಮೆರಿಕನ್ನರನ್ನು ಕೊಂದಿದ್ದಾರೆಯೇ? ಇಲ್ಲ… ಅದು ಸಂಭವಿಸುವವರೆಗೆ ನಾವು ಅವರ ರಾಜಕೀಯ ನಾಯಕತ್ವವನ್ನು ಗುರಿಯಾಗಿಸುವ ಬಗ್ಗೆ ಮಾತನಾಡುವುದಿಲ್ಲ” ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದರು.

ಇಸ್ರೇಲ್ ದಾಳಿಯ ನಡುವೆ ಕದನ ವಿರಾಮದ ಮಾತುಕತೆ ತಿರಸ್ಕರಿಸಿದ ಇರಾನ್

ಇಸ್ರೇಲ್ ದಾಳಿಗೆ ಒಳಗಾಗಿರುವಾಗ ಕದನ ವಿರಾಮ ಮಾತುಕತೆಯಲ್ಲಿ ತೊಡಗುವುದಿಲ್ಲ ಎಂದು ಇರಾನ್ ತನ್ನ ಮಧ್ಯವರ್ತಿಗಳಾದ ಕತಾರ್ ಮತ್ತು ಒಮಾನ್‌ಗೆ ತಿಳಿಸಿದೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ. ಇಸ್ರೇಲ್‌ನ ಪೂರ್ವಭಾವಿ ದಾಳಿಗಳಿಗೆ ಇರಾನ್ ತನ್ನ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಮಾತುಕತೆಗಳನ್ನು ಮುಂದುವರಿಸುತ್ತದೆ ಎಂದು ಕತಾ‌ರ್ ಮತ್ತು ಒಮಾನ್‌ಗೆ ಇರಾನ್ ತಿಳಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.