Home News Interesting Fact: ಪುಟ್ಟ ಬಾಲಕಿ ಮೈಮೇಲೆ ನೈಸರ್ಗಿಕವಾಗಿ ಮೂಡಿದ ರಾಮ್ ಮತ್ತು ರಾಧಾ ಹೆಸರು...

Interesting Fact: ಪುಟ್ಟ ಬಾಲಕಿ ಮೈಮೇಲೆ ನೈಸರ್ಗಿಕವಾಗಿ ಮೂಡಿದ ರಾಮ್ ಮತ್ತು ರಾಧಾ ಹೆಸರು – ಎಂದೂ ಕಂಡು ಕೇಳರಿಯದ ಘಟನೆ ಇದು ಎಂದ ಡಾಕ್ಟರ್ !!

Interesting Fact

Hindu neighbor gifts plot of land

Hindu neighbour gifts land to Muslim journalist

Interesting Fact: ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಅಚ್ಚರಿಯ ( Interesting Fact) ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು, 8 ವರ್ಷದ ಬಾಲಕಿಯ ದೇಹದಲ್ಲಿ ರಾಧೆ-ರಾಧೆ, ರಾಮ್-ರಾಮ್ ಎಂಬ ಪದಗಳು ಮೂಡಿದ್ದು, ಅದನ್ನು ಕಂಡು ಬಾಲಕಿಯ ಕುಟುಂಬಸ್ಥರು ಮಾತ್ರವಲ್ಲದೇ ವೈದ್ಯರೂ ಅಚ್ಚರಿಗೊಂಡಿದ್ದಾರೆ.

ಮೂಲತಃ ಹರ್ದೋಯ್‌ನ ಮಧೋಗಂಜ್ ಬ್ಲಾಕ್‌ನ ಸಹಿಜನ್ ಗ್ರಾಮದಲ್ಲಿ ವಾಸಿಸುತ್ತಿರುವ ರೈತ ದೇವೇಂದ್ರ ಅವರ ಪುತ್ರಿ ದೇಹದ ಮೇಲೆ 15-20 ದಿನಗಳಿಂದ ದೈವಿಕ ನಾಮಗಳು ಕಾಣಿಸಿಕೊಳ್ಲುತ್ತಿವೆ. ಹಿಂದಿ ಭಾಷೆಯಲ್ಲಿ ಹೊರಹೊಮ್ಮುವ ಈ ಹೆಸರುಗಳನ್ನು ಸ್ಪಷ್ಟವಾಗಿ ಓದಬಹುದಾಗಿದೆ. ಇದನ್ನು ಕಂಡ ಕುಟುಂಬಸ್ಥರು ಆರಂಭದಲ್ಲಿ ತಲೆಕೆಡಿಸಿಕೊಳ್ಳಲಿಲ್ಲ. ನಂತರ ಬಾಲಕಿಯ ಸ್ಥಿತಿಯನ್ನು ಪರಿಗಣಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನು ನೋಡಿದ ವೈದ್ಯರೂ ಆಶ್ಚರ್ಯಚಕಿತರಾಗಿದ್ದು, ಬಾಲಕಿಯನ್ನು ಪರೀಕ್ಷಿಸಿದ ಪಿಎಚ್‌ಸಿ ವೈದ್ಯ ಸಂಜಯ್, ಬಾಲಕಿಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇಂತಹ ಘಟನೆಯನ್ನು ನಾನು ನೋಡಿಲ್ಲ, ಕೇಳಿಲ್ಲ ಎಂದು ಡಾ. ಸಂಜಯ್ ಹೇಳಿದ್ದಾರೆ.

ಕೆಲವರು ಇದನ್ನು ದೈವಿಕ ಅನುಗ್ರಹ ಎಂದು ಕರೆಯುತ್ತಾರೆ. ಆದರೆ ಇದು ಹೀಗೇಕೆ ಸಂಭವಿಸುತ್ತಿದೆ ಎಂದು ಇಲ್ಲಿಯವರೆಗೆ ಯಾರಿಗೂ ಅರ್ಥವಾಗಿಲ್ಲ. ಇದೀಗ ಈ ವಿಷಯ ತಿಳಿದ ಕುಟುಂಬಸ್ಥರು ಮಾತ್ರವಲ್ಲ, ಬಾಲಕಿ ವ್ಯಾಸಂಗ ಮಾಡುತ್ತಿರುವ ಶಾಲೆಯ ಸಹ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು, ಆಸ್ಪತ್ರೆ ವೈದ್ಯರು ಕೂಡ ಬೆಚ್ಚಿಬಿದ್ದಿದ್ದಾರೆ.
ಸದ್ಯ ಬಾಲಕಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

 

ಇದನ್ನು ಓದಿ: Shivamogga: ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಬಾಕ್ಸ್ ಪ್ರಕರಣಕ್ಕೆ ರೋಚಕ ತಿರುವು – ಖದೀಮರ ಪ್ಲಾನ್ ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!