Home News Moodabidre: Instagram ಲವ್‌: ಮೂಡಬಿದಿರೆಯ ವಿವಾಹಿತೆ ಪ್ರಿಯಕರನ ಜೊತೆ ಆತ್ಮಹತ್ಯೆ

Moodabidre: Instagram ಲವ್‌: ಮೂಡಬಿದಿರೆಯ ವಿವಾಹಿತೆ ಪ್ರಿಯಕರನ ಜೊತೆ ಆತ್ಮಹತ್ಯೆ

Tragic Story

Hindu neighbor gifts plot of land

Hindu neighbour gifts land to Muslim journalist

Moodabidre: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಮರಕಡ ಬಳಿ ಇಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬಡಗ ಮಿಜಾರಿನ ನಮೀಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರಿಯಕರ ಎನ್ನಲಾದ ಚಾಲಕ ನಿಗ್ಗೋಡಿಯ ಪ್ರಶಾಂತ್‌ ಆತ್ಮಹತ್ಯೆ ಮಾಡಿಕೊಂಡವರು. ನಮೀಕ್ಷಾ ವಿವಾಹಿತೆ. ಇಬ್ಬರು ಗಂಡು ಮಕ್ಕಳ ತಾಯಿ. ಈಕೆ ಗಂಡ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಜಗಳ ನಡೆದಿದ್ದರಿಂದ ನಮೀಕ್ಷಾ ತನ್ನ ತಂದೆ ಮನೆಯಲ್ಲಿ ವಾಸವಿದ್ದಳು.

ಪ್ರಶಾಂತ್‌ ಮೂಲತಃ ಬಾಗಲಕೋಟೆಯ ನಿವಾಸಿ. ಈತನಿಗೂ ಮದುವೆಯಾಗಿದೆ. ಇವರಿಬ್ಬರು ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ನಂತರ ಇದು ಪ್ರೇಮಕ್ಕೆ ತಿರುಗಿದೆ. ಈತ ನಮೀಕ್ಷಾ ಮನೆಗೆ ಕೂಡಾ ಬರುತ್ತಿದ್ದ. ಇತ್ತೀಚೆಗೆ ಇವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಆಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ನಮೀಕ್ಷಾಳ ತಂದೆ ಹಾಗೂ ಪ್ರಶಾಂತ್‌ನ ಸಹೋದರ ನೀಡಿರುವ ದೂರಿನ ಪ್ರಕಾರ ಮೂಡುಬಿದಿರೆ ಪೊಲೀಸ್‌ ನಿರೀಕ್ಷಕ ಸಂದೇಶ್‌ ಪಿ.ಜಿ.ಪ್ರಕರಣ ದಾಖಲು ಮಾಡಿದ್ದಾರೆ.