Home News UPI ವಹಿವಾಟು ಮೇಲೆ ಶುಲ್ಕ ವಿಧಿಸಲು ಆರಂಭಿಸಿದ ಮತ್ತೊಂದು ಬ್ಯಾಂಕ್ – ಈ ಬ್ಯಾಂಕ್ ನಲ್ಲಿ...

UPI ವಹಿವಾಟು ಮೇಲೆ ಶುಲ್ಕ ವಿಧಿಸಲು ಆರಂಭಿಸಿದ ಮತ್ತೊಂದು ಬ್ಯಾಂಕ್ – ಈ ಬ್ಯಾಂಕ್ ನಲ್ಲಿ ನಿಮ್ಮ ಅಕೌಂಟ್ ಇದೆಯಾ?

Hindu neighbor gifts plot of land

Hindu neighbour gifts land to Muslim journalist

UPI: ದೇಶದಲ್ಲಿ ಈಗಾಗಲೇ ಯುಪಿಐ ವಹಿವಾಟಿನ ಮೇಲೆ ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಈಗ ಐಸಿಐಸಿಐ ಬ್ಯಾಂಕು ಪ್ರತೀ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ. ಸದ್ಯ ಇದು ಪೇಟಿಎಂ, ಗೂಗಲ್ ಪೇ, ಫೋನ್​ಪೇನಂತಹ ಪೇಮೆಂಟ್ ಅಗ್ರಿಗೇಟರ್​​ಗಳಿಗೆ ವಿಧಿಸುತ್ತಿರುವ ಶುಲ್ಕವಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

ಹೌದು, ಐಸಿಐಸಿಐ ಬ್ಯಾಂಕ್ ಆಗಸ್ಟ್ 2ರಿಂದ ಶುಲ್ಕ ವಿಧಿಸುತ್ತಿದ್ದು,ಒಂದು ವಹಿವಾಟಿಗೆ 2ರಿಂದ 4 ಮೂಲಾಂಕಗಳಷ್ಟು ಶುಲ್ಕ ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್​ನಲ್ಲಿ ವಿಶೇಷ ಎಸ್​​ಕ್ರೋ ಅಕೌಂಟ್ (Escrow account) ಹೊಂದಿರುವ ಅಗ್ರಿಗೇಟರ್​ಗಳಿಗೆ 2 ಮೂಲಾಂಕಗಳಷ್ಟು ಶುಲ್ಕ ಹಾಕಲಾಗುತ್ತಿದೆ. ಅಂದರೆ, ಪ್ರತೀ 100 ರೂ ಹಣ ಪಾವತಿಗೆ 2 ರೂ ಶುಲ್ಕ ಇರುತ್ತದೆ. ಶುಲ್ಕ ಮಿತಿ 6 ರೂ ಇದೆ.

ಹೀಗೆ ಮಾಡಿದ್ರೆ ಇಲ್ಲ ಶುಲ್ಕ:

ಯುಪಿಐ ಪೇಮೆಂಟ್ ಸ್ವೀಕರಿಸುವ ವರ್ತಕರು ಐಸಿಐಸಿಐ ಬ್ಯಾಂಕ್​ನಲ್ಲಿ ಅಕೌಂಟ್ ಹೊಂದಿದ್ದು, ಅ ಖಾತೆಗೆ ಸೆಟಲ್ಮೆಂಟ್ ಸ್ವೀಕರಿಸುತ್ತಿದ್ದರೆ ಆಗ ಈ ಶುಲ್ಕದಿಂದ ವಿನಾಯಿತಿ ಸಿಗುತ್ತದೆ.

ಯುಪಿಐ ವಹಿವಾಟಿನ ಮೇಲೆ ಶುಲ್ಕವೇಕೆ?

ಯುಪಿಐ ವಹಿವಾಟು ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಮೊತ್ತದಷ್ಟಾಗಿದೆ. ಜುಲೈನಲ್ಲಿ ದಾಖಲೆಯ 1,947 ಕೋಟಿ ವಹಿವಾಟು ನಡೆದಿವೆ. ಒಂದು ದಿನದಲ್ಲಿ 70 ಕೋಟಿ ಸಂಖ್ಯೆಯಷ್ಟು ವಹಿವಾಟು ಆಗುತ್ತಿದೆ. ಇಷ್ಟು ಪ್ರಮಾಣದ ಯುಪಿಐ ವಹಿವಾಟುಗಳಿಗೆ ಅನುವು ಮಾಡಿಕೊಡುವಂತಹ ಇನ್​ಫ್ರಾಸ್ಟ್ರಕ್ಚರ್ ಅನ್ನು ನಿರ್ಮಿಸುವುದಕ್ಕೆ ವೆಚ್ಚವಾಗುತ್ತದೆ. ಜೊತೆಗೆ ಎನ್​ಪಿಸಿಐನ ಯುಪಿಐ ಸ್ವಿಚ್ ಸೌಕರ್ಯ ಪಡೆಯಲು ಶುಲ್ಕ ನೀಡಬೇಕಾಗುತ್ತದೆ. ಈ ವೆಚ್ಚಗಳನ್ನು ಪೇಮೆಂಟ್ ಅಗ್ರಿಗೇಟರ್​ಗಳು ಅಥವಾ ಫಿನ್​ಟಕೆಕ್ ಕಂಪನಿಗಳು ಮತ್ತು ಬ್ಯಾಂಕುಗಳು ಭರಿಸುತ್ತಿವೆ.