Home News I Love RSS Campaign: ಐ ಲವ್‌ ಆರ್‌ಎಸ್‌ಎಸ್‌ ಅಭಿಯಾನ, ಬಿಜೆಪಿ ನಾಯಕರಿಂದ ಪ್ರಿಯಾಂಕ್‌ ಖರ್ಗೆಗೆ...

I Love RSS Campaign: ಐ ಲವ್‌ ಆರ್‌ಎಸ್‌ಎಸ್‌ ಅಭಿಯಾನ, ಬಿಜೆಪಿ ನಾಯಕರಿಂದ ಪ್ರಿಯಾಂಕ್‌ ಖರ್ಗೆಗೆ ಟಾಂಗ್‌

Hindu neighbor gifts plot of land

Hindu neighbour gifts land to Muslim journalist

I Love RSS Campaign: ಸಚಿವ ಪ್ರಿಯಾಂಕ್‌ ಖರ್ಗೆಯವರು ಸರಕಾರದ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ನಂತರ ಕಲಬುರಗಿ ನಗರದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದಿದ್ದು, ʼಐ ಲವ್‌ ಆರ್‌ಎಸ್‌ಎಸ್‌ʼ ಪೋಸ್ಟರ್‌ ಅಭಿಯಾನ ಮಾಡಿದ್ದಾರೆ.

ʼಯಾರು ಭಾರತವನ್ನು ಪ್ರೀತಿಸುತ್ತಾರೋ, ಅವರು ಆರ್‌ಎಸ್‌ಎಸ್‌ ಅನ್ನು ಪ್ರೀತಿಸುತ್ತಾರೆʼ ಎಂದು ಇಲ್ಲಿನ ಪ್ರಮುಖ ರಸ್ತೆ ವೃತ್ತಗಳಲ್ಲಿ ಪೋಸ್ಟರ್‌ ಅಂಟಿಸುವ ಮೂಲಕ ಬಿಜೆಪಿ ನಾಯಕರು ಪ್ರಿಯಾಂಕ್‌ ಖರ್ಗೆಗೆ ಟಾಂಗ್‌ ನೀಡಿದ್ದಾರೆ.

ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ ಸೇರಿ ಬಿಜೆಪಿಯ ಅನೇಕ ಪ್ರಮುಖರು, ಯುವ ಮುಖಂಡರು ನಗರದಲ್ಲಿ ಪೋಸ್ಟರ್‌ ಅಂಟಿಸುವ ಅಭಿಯಾನದಲ್ಲಿ ಪಾಲ್ಗೊಂಡು ಗಮನ ಸೆಳೆದರು.