Home News Dharmasthala: ಧರ್ಮಸ್ಥಳ ಗ್ರಾಮದಲ್ಲಿ ನಡೆದ, ಅಪರಾಧ ಕೃತ್ಯಗಳ ಮಾಹಿತಿ ನನಗೆ ಗೊತ್ತಿದೆ: ಠಾಣೆಗೆ ಶರಣಾಗಿ ಮಾಹಿತಿ...

Dharmasthala: ಧರ್ಮಸ್ಥಳ ಗ್ರಾಮದಲ್ಲಿ ನಡೆದ, ಅಪರಾಧ ಕೃತ್ಯಗಳ ಮಾಹಿತಿ ನನಗೆ ಗೊತ್ತಿದೆ: ಠಾಣೆಗೆ ಶರಣಾಗಿ ಮಾಹಿತಿ ನೀಡಲು ಸಿದ್ಧ!

Crime News Bangalore

Hindu neighbor gifts plot of land

Hindu neighbour gifts land to Muslim journalist

Dharmasthala: ಧರ್ಮಸ್ಥಳ (Dharmasthala)ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಧರ್ಮಸ್ಥಳ ಠಾಣೆಗೆ ಬಂದು ಮಾಹಿತಿ ನೀಡುವುದಾಗಿ ಬರವಣಿಗೆ ಇರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಈ ಪತ್ರದ ಸತ್ಯಾಸತ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಪತ್ರದಲ್ಲಿ ನಮೂದಿಸಲಾಗಿದ್ದ ಬೆಂಗಳೂರಿನ ವಕೀಲರಿಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಿಂದ ಸಂಪರ್ಕಿಸಿದಾಗ, ಸದ್ರಿ ವಕೀಲರು ವ್ಯಕ್ತಿಯೋರ್ವ ತನ್ನ ಬಳಿ ಬಂದು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ತನಗೆ ಮಾಹಿತಿ ಇರುವುದಾಗಿ ಹಾಗೂ ತಾನು ಪೊಲೀಸ್‌ ಠಾಣೆಗೆ ಶರಣಾಗಿ ಮಾಹಿತಿಯನ್ನು ನೀಡಲು ಸಿದ್ಧವಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ವ್ಯಕ್ತಿಗೆ ಅಗತ್ಯವಾದ ಕಾನೂನು ಸುರಕ್ಷತೆಯನ್ನು ಕಲ್ಪಿಸಿ, ಆ ಬಳಿಕ ಆತನನ್ನು ಹಾಜರುಪಡಿಸುವುದಾಗಿ ವಕೀಲರು ತಿಳಿಸಿರುತ್ತಾರೆ.

ಅದರಂತೆ ಸದ್ರಿ ವ್ಯಕ್ತಿ ಹಾಜರಾಗಿ ಮಾಹಿತಿ ನೀಡಿದಲ್ಲಿ, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: Prakash Shah: 75 ಕೋಟಿ ರೂ ಸಂಬಳದ ತ್ಯಜಿಸಿ ಜೈನ ಸನ್ಯಾಸಿ ದೀಕ್ಷೆ ಪಡೆದ ರಿಲಯನ್ಸ್ ಉಪಾಧ್ಯಕ್ಷ!!